Saturday, January 16, 2010

ಅಂತರ್ಜಾಲವ್ನ್ನೆಲ್ಲಾ ಜಾಲಾಡಿದರೂ ಸಿಗದ ಸುದ್ದಿ samaachaara

ಮೊನ್ನೆ ಊರಿಗೆ ಹೋಗಿದ್ದೆ. ಬೆಳ ಬೆಳಿಗ್ಗೆ ಇನ್ನೂ ಸ್ಲೀಪಿಂಗ್ ಮೊಡಲ್ಲಿಯೇ ಇದ್ದೆ. ಪರಗೋಲದ ಸೂರೆನ್ನೇ ದಿಟ್ಟಿಸುತ್ತ ಕೂತಿದ್ದೆ. ಗೇಟಿನ ಸದ್ದಾದದ್ದೇ ಏನೋ ವಿಶೇಷ ಸುದ್ದಿ ಉಂಟು ಎಂಬುದು ಖಾತ್ರಿಯಾಗಿತ್ತು!
" ಮತ್ತೆನ್ರೋ ಹುಬ್ಬಳ್ಳಿ ಭಟ್ರು.... ಯಾವಾಗ ಬರೋಣಾತು? ಮತ್ತೆಲ್ಲಾ ಆರಾಮ? ನಿನ್ನೆ ರಾತ್ರೆನೆ ಬಂದ್ಯನೋ ಮಾರಾಯ. ಒಂದ್ಮಾತು ಹೇಳೋದಲ್ಲಾ? ನಿನ್ನೂ ಕರ್ಕಂಡು ಹೋಗ್ತಿದ್ವಲೋ ಮಾರಾಯ", ಹೀಗೆ ನಿರರ್ಗಳವಾಗಿ ರೇಡಿಯೋ ಮಿರ್ಚಿಯ ಪ್ರದೇಶ ಸಮಾಚಾರ ಪ್ರಸಾರ ಆಗಲೇ ಶುರುವಾಗಿಬಿಟ್ಟಿತ್ತು. ಊರು ಅಂದ್ರೆ ಹಾಗೇನೆ...... ಅದೊಂದು ತರಹಾ ಆಕಾಶವಾಣಿಯ ವಿವಿಧ ಭಾರತಿ ಸ್ಟೇಶನ್ ಇದ್ದಂಗೆ! ಬೇಕಾಗಿರಲಿ ಬೇಡಾಗಿರಲಿ ಎಲ್ಲವೂ ಕಣ್ಣಿಗೆ ಕಟ್ಟುವಂತೆ ಕಿವಿಮೇಲೆ ಬೀಳುತ್ತಿರುತ್ತವೆ. ತುಂಡಿಲ್ಲದ ಆರದ್ರೆ ಮಳೆಯ haage!
'ನಿನ್ನೆ ರಾತ್ರೆ ಹನ್ನೆರಡಾತ್ ನೋಡು. ಪಡಿಗ್ ಪಡೇನೆ ಅಲ್ಲಿಗೆ ಹೋಗಿದ್ಯ. ಅವ್ವು ಎಂತಾ ಮಾತಾಡ್ತ್ವ? ದಿನಾ ಇಲ್ಲಿಪ್ಪವ್ವು ಯಂಗ. ರಸ್ತೆ ಬೇಕಾದ್ದು ಯಂಗಕ್ಕಲ್ದನ.... ಹೊಯ್..... ಎಂತಾ ಹೇಳ್ತೆ ನೀನು.... ಇದೊಳ್ಳೆ ಕತೆಯಾಗೊತಲ ಮಾರಾಯ......', ಹೀಗೆ ಯಕ್ಷಗಾನ ತಾಳಮದ್ದಲೆಯಲ್ಲಿನ ವಿದೂಷಕನ ಪಾತ್ರದಂತೆ ನಿರೂಪಣೆ ಸಾಗಿತ್ತು. ದೇವರಾಣೆ ಮಾಡಿ ಹೇಳ್ತೇನೆ ನನಗೊಂದೂ ತಲೆಬುಡ ಅರ್ಥ ಆಗ್ಲಿಲ್ಲ. ನಾನೂ ಒಂದು ಕವಳ ಹಾಕಿ ಅಡಿಕೆ ಸೊಕ್ಕು ಹತ್ತಿ ಬೆವರಿಳಿಯ ಹತ್ತಿದಮೆಲೆಯೇ ತಿಳಿದದ್ದು ಇದು ಹೊಸದಾಗಿ ನಿರ್ಮಾಣವಾದ ರಸ್ತೆಯ ಸುದ್ದಿ ಎಂದು!
ಊರೆಂದರೆ ಊರು ಅದು! ರೈಲು ಬೋಗಿಯಂತಿರುವ ಸಾಲು ಸಾಲು ಮನೆಗಳು. ಊರಮುಂದಿನಿಂದೊಂದು ಗಾಡಿರಸ್ತೆ! ಯಾರ ಮನೆಗೆ ಯಾರು ಬರುವದಿದ್ದರೂ ಅದೊಂದೇ ಹೆದ್ದಾರಿ! ಮಧ್ಯಾಹ್ನ ಜಗಲಿಕಟ್ಟೆಯ ಹೇಡಿಗೆಯ ಮೇಲೆ ಕುಳಿತರೆ ಮುಸ್ಸಂಜೆgE ಏಳುತ್ತಿದ್ದ ವಯಸ್ಸಾದ ಹೆಂಗಸರ ಕುರಿತು ನಾವು ಚಿಕ್ಕವರಿದ್ದಾಗ ತಮಾಷೆ ಮಾಡಿ ನಗುತ್ತಿದ್ದದ್ದುಂಟು. ಅದೊಂದು ತರಹದ ಚೆಕ್ ಪೋಸ್ಟ್ ಇದ್ದಹಾಗಿತ್ತು!
"ಎಸ್ತ್ದೂರ್ ಹೋಗಿದ್ಯ.....ಅವ್ರಮನೆ ಸುಜಾತ ಇನ್ನೂ ಮುಟ್ಟೇ ಅಯ್ದಿಲ್ಯ ಎಂತದೆ......ಹಿಂಡಿಚೀಲ ಎಂಥ ನೀ ಹತ್ಗಂದ್ ಹೋಗ್ತ್ಯ....... ಆಳಗ ಇಲ್ಲ್ಯನಾ.... ಯಂಗಂತೂ ಈ ಸಲ ಚೌತಿ ಹಬ್ಬಕ್ಕೆ ಮುತ್ತ ಅಪ್ಪೋ ದಿವ್ಸ ಮಾರಾಯ್ತಿ.....ದೆರ್ಪೂಜೆ ಬಾರೀನೂ ಬಿಂದು..... ಎಂತಾ ಮಾಡೋ ತಿಲಿತಿಲ್ಲೇ....... ಮುಟ್ ಮುಂದೊಪ್ ಗುಳಿಗೆ ಅದರೂ ತಂದ್ಕೊಡಿ ಹೇಳಿ ಯಮ್ಮನೆ ಅವರತ್ರ ಹೇಳಿದ್ದೆ.........ಹೀಗೆ ತೀರಾ ಖಾಸಗಿ ಸಂಗತಿಗಳಿಂದ ಮೊದಲಾಗಿ ಏನೆಲ್ಲಾ ವಸ್ತು ವೈವಿಧ್ಯಗಳುಧಾರವಾಡ ಆಕಾಶವಾಣಿಯ ಅಕ್ಕನ ಬಳಗ ಕಾರ್ಯಕ್ರಮದಂತೆ ಬಿತ್ತರಗೊಳ್ಳುತ್ತಿದ್ದದ್ದು ನಮ್ಮಂತ ಪಡ್ಡೆಗಳಿಗೆ ವಿನೋದದ ಸಂಗತಿಯಾಗಿತ್ತು!
ನನಗಿನ್ನೂ ನೆನಪಿದೆ...... ಕೊಟ್ಟಿಗೆ ಚಾಕರಿಗೆಂದು ಕಿಲೋಮೀಟರ್ ಉದ್ದ ಹಿಂದಿತಾತು,ಹಾಲಿನ ಕ್ಯಾನು ಹಿಡಿದು ಹೋಗಿ ಹಾಲು ಕರೆದುಕೊಂಡು ಬರುತ್ತಿದ್ದುದು! ಬತ್ತವಿರಲಿ, ಅಡಿಕೆ ಇರಲಿ ತಲೆಯಮೆಲೆಯೇ ಹೊತ್ತುಕೊಂಡು ಮನೆತಳುಪಿಸಬೇಕಾದರೆ ಏಳು-ಹನ್ನೊಂದು ಆಗ್ತಿತ್ತು!
ಒಂದೆರಡು ತಲೆಮಾರು ಹೀಗೆಯೇ ಕಳೆದಿರಬೇಕು. ಈಗೀಗ ಬೆಳೆಯುತ್ತಿರುವ ಹುಡುಗರಿಗೆ ಊರ ಹಿಂಬಾಗದಿಂದಲೂ ಒಂದು ರಸ್ತೆಯಿದ್ದರೆ ಎಲ್ಲರಿಗೂ ಅನುಕೂಲ ಎಂಬುದು ಜ್ಞಾನೋದಯವಾಗಿ ತಿಂಗಳಾನುಗಟ್ಟಲೆ ಜಗಲಿ ಪುರಾಣದಲ್ಲಿ ಚರ್ವಿತ ಚರ್ವನವಾಗುವದರಲ್ಲಿ ಅದಾಗಲೇ ಆ ರಸ್ತೆಬರುವ ಜಾಗವನ್ನು ಅತಿಕ್ರಮಿಸಿದ ಭೂಪನೊಬ್ಬ ಅಲ್ಲಿ ಬೇಲಿ ಹಾಕಿ ತಕರಾರು ತೆಗೆಯಲು ಪ್ರಾರಂಭಿಸಿದ್ದೆ ಸರಣಿ ತಾಳಮದ್ದಳೆಗೆ ಅವಕಾಶವಾಯಿತು. ರಥಬೀದಿ ಪರ್ವ, ಸುಂದರಕಾಂಡ, ಸರೋಜರಾಸಂಧ, ಸುಮಕೊಮಲೋಪಾಖ್ಯಾನ ಹೀಗೆ ತಿಂಗಳುಗಳ ಕಾಲ ನಡೆದ ಜಗಲಿಕಟ್ಟೆ ತಾಳಮದ್ದಳೆಗೆ ರಂಗು ಏರಿದ್ದು ಗಧಾಯುದ್ದ ಪ್ರಸಂಗದಿಂದ. ಈಗ ತಾನೇ ಸುಂಬಳ ಗತ್ತಿಗೊಲ್ಲುತ್ತಿರುವ ಎಲೆಪೋರಂದಿರು ಸೆಡ್ಡು ಹೊಡೆದಾಗಲೇ ಅದಕ್ಕೊಂದು ಹುರುಪು ಬಂದಿದ್ದು. ಪಡೆಗೆ ಪಡೆಯೇ ಸಲಿಕೆ ಪಿಕಾಸುಗಲಾದಿಯಾಗಿ ಸಕಲ ಹತ್ಯಾರಗಳೊಂದಿಗೆ ಬೆಲಿಮುರಿ, ಧರೆ ಅಗೆದರು ರಸ್ತೆ ನಿರ್ಮಾಣ ಆಗಿಯೇ ಹೋಯಿತು.
ಅಲ್ಲಿಂದ ಸುರುವಾಯಿತು ನೋಡಿ ಪೋನಾಯನ. ರಸ್ತೆ ಬಳಸುವವರಬಿತ್ತು ಊರ-ಪರವೂರ ಹೆಗಡೆ-ಭಟ್ಟರಾದಿಯಾಗಿ ಎಲ್ಲರಿಗೂ ಕರೆ -ಕರೆ, ಜತೆಗೆ ಲೋಕಲ್ ರಾಜಕೀಯದ ಘಾಟು! ರಾಮ-ಕೃಷ್ಣಾ, ಹನುಮ- ಭೀಮ ಎಲ್ಲರೂ ಬಂದರೋ ಬಂದರು..... ಬರಪರಿಹಾರ ಸಮೀಕ್ಷೆಗೆ ದಿಲ್ಲಿ ನಾಯಕರು ಹೀಗೆ ಬಂದು ಹಾಗೆ hodante! " ಅಲ್ಲಿಂದ ಸುರುವಾಯಿತು ನೋಡಿ ಸಾಯಂಕಾಲದೊಳಗೆ ಪಡೆ ಪಡೆಯೇ ಜಮಾಯಿಸಿ ಊರ ಪಂಚಾತಿಗೆ ಬಂದ ದೊಡ್ಡವರ ಮನೆಗೆ ಹೋಗಿ ನಮ್ಮೂರ ರಸ್ತೆಗೆ ನಿಮ್ಮದೇನು ಯಜಮಾನಿಕೆ... ನಮ್ಮೊಳಗನ್ನು ನಾವು ಬಲ್ಲೆವು ..... ಬರುವದಾದರೆ ಬನ್ನಿ ಊರ ಕೊಳಕೆಲ್ಲ ಸುಧಾರಿಸಿ....ಒಂದುಕನ್ನಿಗೆಬೆಣ್ಣೆ ಇನ್ನೊಂದಕ್ಕೆ ಸುಣ್ಣ ಇದಾವ ನ್ಯಾಯ?....... ಮಾತಲ್ಲೇ ಕಟ್ಟಿಹಾಕಿ..... ತಂತ್ರಕ್ಕೆ ಪ್ರತಿ ತಂತ್ರ ಹೂಡಿ ಅಂತೂ ಮನಿಗೆ ಬರಲ್ಲೇ ಹನ್ನೆರಡು ಗಂಟೆ ರಾತ್ರೆ ಮಾರಾಯ!" ಈಗ ಮತ್ತೊಮ್ಮೆ ಮುಖ್ಯಾಂಶಗಳು .....ತೆಳತ್ತ ಇಲ್ಲಯ ತಮ......ನಿನ್ಗಕ್ಕೆನ್ತಾ ಗೊತ್ತಾಗ್ತು..... ಸಾಕೋ ಸಾಕು ಮಾರಾಯ...... ಈ ನರಜನ್ಮ. ಸುಬ್ಬಾ ಭಟ್ರು ಮೊನ್ನೆ ಅತ್ತಾ ಹತ್ತಲ್ಲೇ ಹೋಗಿ ಬಿದ್ ಪೆತ್ತಾಗೊಯ್ದದ. ನಿನ್ ಕಾರ್ ತೇಗಿ ನೋಡನ ಅವ್ರನ್ನೊಂದಿಸ್ತು ನೋಡ್ಕ್ಯನ್ದಾರುವ ಬಪ್ಪನಾ....."
ಇಂತಾ ಮನರಂಜನೆ, ಇಡೀ ಪ್ರಾದೇಶಿಕ, ಬೌಗೋಳಿಕ ವರ್ತಮಾನ ಅಂತರಜಾಲದಲ್ಲಿ ಜಾಲಾಡಿದರೂ ಸಿಕ್ಕೀತಾ?
ವಾವ್ ಕುಂತಲ್ಲೇ ಎಷ್ಟೊಂದ್ ಮಾಹಿತಿ.... ಅದೇನು ರಸವತ್ತಾದ ವರ್ಣನೆ........ಗ್ರೇಟ್! ಹ್ಯಾಟ್ಸ್ ಆಪ್ಹ್ .....

5 comments:

  1. ಊಹೂ೦ ಎಷ್ಟ್ ಹುಡುಕಿರೂ ಸಿಕ್ತಿಲ್ಲೆ!

    ಬರಹ ಚೆನಾಗಿದೆ. ಬರೆಯುತ್ತಿರಿ.

    ReplyDelete
  2. ದೃಶ್ಯವೇ ಕಣ್ಣಿಗೆ ಕಟ್ಟುವ ಹಾಗೆ ರಸವತ್ತಾದ ಬರವಣಿಗೆ.

    ReplyDelete
  3. Ondasala oorige hogi nalku dina idkand bandange aatu ......very nice!!

    ReplyDelete