Monday, December 30, 2013

ಥಟ್ಟನೆ ತಟ್ಟಿದ ಬ್ಯುಕೋಸ್ಕಿ ಕವಿತೆಗಳು

I was touched and moved by a poem posted on one of my friends' wall yesterday afternoon. It haunted me like anything. I had requested that friend who is an ultimate fan of Gazal Samrat Mirza Galib, whom I love most, to provide the contact of the poet. That's how I came into contact with Albert Alexander Bukoski, an American poet. He is a peculiar kind of writer! He says he writes poetry for the sake of pleasure of writing! Never published his poems anywhere else apart from his page (https://www.facebook.com/AlbertsPoetryBooks) I have decided to translate his poems into Kannada and got his permission immediately. My sincere thanks to poet Mr. Albert Alexander Bukoski and also my friend who doesn't want to disclose identity, for their loving support.- Vasant

ತಪ್ಪಾಯಿತೆ ಅಷ್ಟೊಂದು ನಂದು?

ನನ್ನ ನೆನಪುಗಳಲ್ಲಿ ಅಚ್ಚೊತ್ತಿದೆ,
ಬಂಗಾರದಂತಹ ಪ್ರೀತಿ ನೀಡಲು ಮೋಹದ ಮೃದುಗಾಳಿ
ಮೆಲುವಾಗಿ ಬೀಸುತ್ತ ಒಬ್ಬಂಟಿ,
ನನ್ನಿಂದ ಬಲುದೂರ,
ನನ್ನ ಸಮಾಧಾನಕ್ಕೆಳೆಸುವ ಯತ್ನ.
ಮೌನ,
ಸಾಕಾಗಿದೆ ನನಗೆ ಮಾತು, ಪ್ಲೀಸ್...

ದೂರ.. ಬಲು ದೂ....ರ
ಇದ್ದರೂ ನೀ ಹತ್ತಿರವಿದ್ದಂತೆ ನನಗೆ,
ಅದಕೆಂದೆ ನೀನಿಂದು ಬರಲಾರೆ ನನ್ನಲ್ಲಿಗೆ,
ನೆಲೆಸಿರುವೆ ನನ್ನ ಹೃದಯಾಂತರಾಳದಲಿ,
ಅದು ಕೇವಲ ನಾನು.

ಕನಸಿನೆಡೆಗೆ ಚಲಿಸುತ್ತ,
ನಮ್ಮ ಜೋಡಿಯಾಗಿಸುವ,
ಅದು ಆಗುವಂತೆ ಕಾಣುವುದಿಲ್ಲ,
ನೀನು ನನ್ನದೆಯ ಖನಿಯಾಗಬಯಸುವೆಯಲ್ಲ

ಮಾಡಿದ್ದೇನು ನೀನು? ದೂರ ಸರಿದದ್ದು
ಒಲವು ಮತ್ತೆನ್ನ ಹೃದಯದಿಂದ ದೂರ,
ತುಂಬ ಹತ್ತಿರಿದ್ದೆವು ನಾವು ಒಮ್ಮೆ,
ಎಷ್ಟೊಂದು ದೂರಸರಿದಂತನ್ನಿಸಿದೆ ಈಗ,

ಬಯಸಿದ್ದೆಯಾ ನೀಯೆನ್ನ?
ನನಗದು ಅರ್ಥವಾಗಲೆ ಇಲ್ಲ
ನಾನಂದುಕೊಂಡಿದ್ದು ನಾವು,
ನಾ ನೋಡಿದ್ದು,
ಕೈಯೊಳಗೆ ಕೈಯಿಟ್ಟು ಜತೆಯಲ್ಲಿ ಪಯಣಿಸುವೆವೆಂದು:

ನಾನಿನ್ನ ಮುಖ್ಯಪ್ರಾಣ ಆಗಬಹುದೆಂದುಕೊಂಡಿದ್ದೆ.
ತಪ್ಪಾಯಿತೆ ಅಷ್ಟೊಂದು ನಂದು?
ನೋವಿನ ರಾಗ ನುಡಿಸುವುದ ಕೇಳುತ್ತಿದ್ದೇನೀಗ,
ಘನಘೋರ ಹಾಡನ್ನು ನಾ ಹಾಡುವೆ.

************

ಪ್ರಿಯ ಗುಲಾಬಿ,

ನೀನು ಬೆಳೆದ ನನ್ನ ಚೆಂಗುಲಾಬಿ
ಲೋಕದಲ್ಲಿ ನಾನೀಗ ಯಾರನ್ನ ಕೂಗಿ ಕರೆಯಲಿ?
ಯಾರಿಗೂ ಗೊತ್ತಿರದ ಗುಲಾಬಿ ಎಂದಿಗೂ
ಉನ್ಮಾದದಿಂದ ಹೊರಟೇ ಹೋಗಿರುವಾಗ.
ಓ ನನ್ನೊಲವೆ, ನಾನೊಂದು ಹೂದೋಟ.
ನೀ ನನ್ನ ಚೆಂದನ್ನೆ ಅಲರು
ಓ ನನ್ನ ಪ್ರಿತಿ, ನಾನೊಂದು ಕೈತೋಟ
ನೀ ನನ್ನ ಚೆಂದುಳ್ಳಿ ಚೆಲುವೆ ಹೂವು.

ಗೊತ್ತಿಲ್ಲ ಯಾರಿಗೂ ಅದರ ಸ್ಪರ್ಶರಸರೂಪ,
ದಿನ ಕಳೆದಂತೆ,
ನಿಜವಾದ ಪಕಳೆಯುದುರುವ ಭಾವದ ಬದುಕು
ದೂರವಾಗದು ಅದೆಂದೂ.

ನನ್ನ ಉತ್ಕಟ ಚಡಪಡಿಕೆಗೆ
ಮೃದು ಮಧುರ ಪ್ರೀತಿಯ ಉಸಿರು ಹೋಗಿದೆ
ನನ್ನದೆನ್ನುವ ಒಂದು ಬಂಧ
ಬೆಳಗಿಂದ ಬೈಗಿನವರೆಗೆ ಪ್ರೀತಿಯಿಂಧಲೆ ನಡೆಸಿದ್ದು,
ಮತ್ತದನ್ನೂ ಮೀರಿದ್ದು.

ಏನಾಗಬಹುದಿತ್ತು?
ಹಂಚಿಕೊಳ್ಳಬಹುದಿತ್ತು ಏನೆಲ್ಲವ ನಾವು?
ತಿಳಿಯಲಾರದು ಎಂದಿಗೂ
ನೀನು ಬೆಳೆದಿರಲೇ ಇಲ್ಲ ಅಷ್ಟು.

ದೇವರೇಕೆ ಕೊಡುತ್ತಾನೆ, ಮತ್ತೆ ಕಿತ್ತುಕೊಳ್ಳುತ್ತಾನೆ?
ಇಷ್ಟೊಂದು ಬೇಗನೆ ಗುಲಾಬಿ ಕಿತ್ತೊಯ್ದದ್ದು ಅವನಾಗಿರಲಿಲ್ಲ,
ನೀನು ಹೋದಂತೆಲ್ಲ, ನನ್ನೆದೆಯನ್ನು ಇನ್ನೊಂದು ದಸಿಯಿರಿದಿತ್ತು
ನನ್ನ ಪಾಲಿನ ಸೂರ್ಯ, ಗಾಳಿ, ಭೂಮಿ,ಚಂದ್ರ ಎಲ್ಲವೂ ನೀನೆ ಆಗಿರುವಾಗ.

ಚೆಲುವು ನೀನು,
ಮಧುರತೆಯು ನೀನು,
ಮುಗ್ಧೆ ನೀನು,
ಮೃದು ಮತ್ತೆ ಪ್ರೀತಿ ತುಂಬಿದ ಕೊಡ ನೀನು,
ನಾನು, ನೀನು.....

ವಿಶ್ರಮಿಸು ಪ್ರಿಯ ಗುಲಾಬಿ,
ನೀನೆನ್ನ ಪ್ರಾಣ,
ಒಲವಿನ ಗುಲಾಬಿ, ನನ್ನ ದೇಹದ ಪ್ರತಿ ಅಂಗ
ಈಗಲೂ ನನ್ನೊಂದಿಗಿವೆ ಬೆಚ್ಚನೆಯ ಸ್ಪರ್ಶದೊಡನೆ.
ನನ್ನೊಲವೆ, ನಾನು ಹೂದೋಟ,
ನೀ ನನ್ನ ಚೆಂದನೆಯ ಪುಷ್ಪರಾಗ
ಎಷ್ಟೊಂದು ಅಕ್ಕರೆ ಆರೈಕೆಗಳ ನಾ ನೀಡೆ
ನೀನು, ಚೆಂಗುಲಾಬಿ, ಮುಗ್ಧೆ, ಶುದ್ಧೆ...
ಅಂದದಾ ಹೂವುಗಳು, ಹೊಂದಲಾರವೇ ಎಂದಿಗೂ ಬೆಳೆಯುವಾ ಅವಕಾಶ.

******

ನಟ್ಟನಡು ಇರುಳಲ್ಲಿ ಅವಲೋಕಿಸು ಬಾ ಸಾವೆ,

ನಟ್ಟನಡು ಇರುಳಲ್ಲಿ ಅವಲೋಕಿಸು ಬಾ ಸಾವೆ,
ಬಾಚಿಕೋ ನಿನ್ನ ಕೈಗಳಿಂದ,
ಹೆದರಿ ಓಡುವ ಹೇಡಿಯಂತೆ ಸಾಯುವ ಬದಲು
ಸಮರಯೋಧನ ಹಾಗೆ ಒಂದೆಗುಕ್ಕಿಗೆ
ಸಾಯುವುದು ಲೇಸು.

ಮಧ್ಯರಾತ್ರಿಯ ಚಂದ್ರ ಎತ್ತರಕ್ಕೇರುವ ಮೊದಲು ಬಾ,
ಶಕ್ತಿಜ್ವಾಲೆಯ ಕಾಣುತ್ತದೆ ಅನಂತಲೋಕ,
ಕನಸುಗಳು ಬಿಟ್ಟುಕೊಡುತ್ತವೆ ಇಲ್ಲಾ ಹೋರಾಡುತ್ತವೆ,
ಈಗಲೇ ಜಾಗ ಖಾಲಿಮಾಡು ಇಲ್ಲಾ ಮುನ್ನುಗ್ಗು ಪೂರ್ಣ.

ಕನಸೊಂದು ತುಂಬಿದ ಯೋಧನೊಬ್ಬ,
ಎತ್ತರಕ್ಕೇರುವ ಹಂಬಲದಿ ಜಯಿಸುತ್ತಾನೆ ಭೂಪ,
ಸಾಯುತ್ತೇನೆ ನಾನು ಖಂಡಿತವಾಗಿ,
ಕನಸಗುರಿ ಮುಟ್ಟದೆ ಮತ್ತೆ ಬಿದ್ದು
ಹೇಡಿಯಂತೆ ಸಾಯುವ ಬದಲು
ಸುಟ್ಟುಬಿಡಿ ನನ್ನನ್ನು...
ಮತ್ತು ತೇಲಿಬಿಡಿ ಬಂಗಾರದ ಹರಿದೊರೆಯಲಿ



ಇಂಗ್ಲಿಷ್ ಮೂಲ: ಆಲ್ಬರ್ಟ್ ಅಲೆಕ್ಸಾಂಡರ್ ಬ್ಯುಕೋಸ್ಕಿ
(https://www.facebook.com/AlbertsPoetryBooks)

ಅನು : ವಸಂತ (3-12-2013)

No comments:

Post a Comment