Thursday, February 4, 2010

ಯಕ್ಷಪ್ರಶ್ನೆ

ಸತ್ತ ನಿನ್ನೆಗಳಲ್ಲಿ ಹುಟ್ಟಿರದ
ನಾಳೆಗಳಲ್ಲಿ ಬದುಕು
ಅರಳುವ ಭ್ರಮೆಯಲ್ಲಿ
ನವಜಾತ ಇಂದು ಪಾಪ-
ದ ಕೂಸು; ಕಣ್ಣುತೆರೆಯುವ
ಮುನ್ನವೇ ಕಾಲ ತುಳಿತಕ್ಕೆ
ಸಿಕ್ಕು ನರಳುತ್ತದೆ ಚೀರುತ್ತದೆ
ಕೇಳುವವರಿಲ್ಲ.

ನಿನ್ನೆನಾಳೆಗಳ ಸಾವುಹುಟ್ಟುಗಳಲ್ಲಿ
ಇಂದು ಬದುಕುವುದೇ ಇಲ್ಲ
ಜೀವಜಲ ಸಿಕ್ಕದೇ
ಸಿಕ್ಕಿದ್ದೂ ದಕ್ಕದೇ
ನಿನ್ನೆ-ನಾಳೆಗಳ ಕೊಂಡಿ
ಯಾಗದೇ ಇಂದು
ಸಾಯುತ್ತದೆ ದಿನವೂ
ಸತ್ತು ಹುಟ್ಟುತ್ತದೆ.

ನಿತ್ಯ ಸಾಯೋ ಆಟ
ಹುಟ್ಟಿಸಾಯೂ ಆಟ
ಆಡಿ ಆಡಿ ದಣಿವ
ಇಂದು ಅರಳುವುದೇ?
ಇಲ್ಲ ನರಳಿ ಮರಳುವುದೇ?

* ಹೊಸ ಸುದ್ದಿ ಈಗ ತಾನೇ ಸಂಜೆ ಕರ್ನಾಟಕ ಎಂಬ ಪತ್ರಿಕೆ ಪ್ರಾರಂಭವಾಗಿದೆ. ಕವಿ ಚೆನ್ನವೀರ ಕಣವಿ ಸಂದರ್ಶನ ನಾಮಾಡಿದ್ದೇನೆ. ನೋಡಿ http://www.sanjekarnataka.com/Feb-5_sup.pdf







12 comments:

  1. ಅರಳುವುದು..ಮರಳುವುದು ಪ್ರಕೃತಿ ನಿಯಮ...ಕವನ ಚೆನ್ನಾಗಿದೆ..ವಂದನೆಗಳು

    ReplyDelete
  2. ನಿನ್ನೆ ನಾಳೆಗಳ ಮಧ್ಯೆ ಸಿಕ್ಕು,ನರಳುವ ಇಂದಿನ ಬಗ್ಗೆ ನನ್ನ ಸಹಾನುಭೂತಿಯೂ ಇದೆ.

    ReplyDelete
  3. Dear Subrahmanya welcome to my blog. Thanks for the comment.
    Umakka arluvudu....maraluvudu....naraluvudu....elladara naduveye baduku pakkaguttade. ultimately search will not end! hudukaatakke antyavilla. adu badukannu sahaneeyavaagisaballa nirantara kriye endu nanna ambona. Thanks for the comment
    Suma thanks for appreciation.

    ReplyDelete
  4. ಯಕ್ಷಪ್ರಶ್ನೆ ಕವನ ತುಂಬಾ ಹಿಡಿಸಿತು. ಹಾಗೂ ಒಂದರ ನಂತರ ಇನ್ನೊಂದು ಹೊಸತನ್ನು ನಮ್ಮೆದುರಿಗೆ ಸುರಿಯುತ್ತಿರುವ ನಿನ್ನ ಶಕ್ತಿಗೆ/ಉತ್ಸಾಹಕ್ಕೆ ಖುಷಿಯಾಯ್ತು.

    ReplyDelete
  5. HEY VASANT POEM SO SO SO GOOD REALY ITS VERY MEANINGFUL SO
    NARALI MARALISUVUDU BEDA HORATAAGI ARALISONA PARIMALA BEERONA MATTU DUKHAVANNU MAREYONA HEGANTEERA ...
    -VE THINKING BITTU +VE THINKING MADONA..
    JEEV KHUSHIYANDIDDARE MATR JEEVAN KUSHALAVAAGUVUDU..

    ReplyDelete
  6. Kirti,
    U r right! Positive thinking gives positive energy. But an autom is a perfect blend of positive and negative! Thanks for the comment

    ReplyDelete
  7. ವಸಂತ್ ಅವರೆ ನಿಮ್ಮ ಅಭಿಮಾನಕ್ಕೆ ಮನ ತುಂಬಿದೆ. ಜೀವವೈವಿಧ್ಯದ ಬಗ್ಗೆ ಬರೆಯುತ್ತಿರುವುದು ನಿಜವಾದರೂ ಜೀವಿಗಳ ಬಗ್ಗೆ ಸಮಗ್ರವಾಗಿ ಬರೆಯಲಾಗುತ್ತಿಲ್ಲ. ಕೆಲ ಮುಖ್ಯ ವಿಚಾರಗಳನ್ನಷ್ಟೆ ಬರೆಯುತ್ತಿದ್ದೇನೆ. ನಿಮ್ಮಂಥವರ ಪ್ರೋತ್ಸಾಹ ಇನ್ನೂ ಚೆನ್ನಾಗಿ ಬರೆಯಬೇಕೆಂಬ ಆಸೆ ಹುಟ್ಟಿಸುತ್ತಿದೆ. ನೀವು ಹೇಳಿದ ಬಾಲಭವನದ ವೆಬ್ ನೋಡಿದೆ. ವಿಭಿನ್ನವಾದ ಶಾಲೆ. ಸಂತಸವಾಯಿತು. ಹಾಂ ನನ್ನ ಮೇಲ್ -sumaks77@gmail.com . thanks a lot .

    ReplyDelete
  8. DR.D.T.K.MURTHY
    Ninne kaleda adhyaya. naale ennuvudu ondu bhrame.adu baruvude illa.INDU sadaa nala nalisuva hasiru.Adakke nimminda KOOSEMBA muddaada hesaru.Adannu koosina beragu kannu galinda noduvuda kaliyona.KAVITE koosinaste muddaagide.

    ReplyDelete
  9. ನಿನ್ನೆ ಇ೦ದು ನಾಳೆಗಳ ತುಲನೆ...ನಿಜ..ಯಾವುದು ನಮ್ಮ ಕೈಯ್ಯಲ್ಲಿದೆಯೋ ಅದು ಕಾಣಿಸದು.
    ಗತ ಹಾಗೂ ಭವಿಷ್ಯದ ಕನಸೇ ತು೦ಬಿಕೊ೦ಡು ಹೆಚ್ಚು ..ವರ್ತಮಾನದ ನೆನಪು ಇರುವುದೇ ಇಲ್ಲ..
    ಕವನ ಚೆನ್ನಾಗಿದೆ..

    ReplyDelete