Sunday, February 7, 2010

ಮೌನದ ನಂತರ ತೆರೆದ ಅಂತರಂಗ!ಇವತ್ತಿಡಿ ಖುಷಿಯ ದಿನ! ಭೈರಪ್ಪ ಧಾರವಾಡಕ್ಕೆ ಬರುತ್ತಾರೆ ಎಂದು ಗಡಬಡಿಸಿ ಊರಿಂದ ಬಂದೆ. ಕರ್ನಾಟಕ ವಿಶ್ವವಿದ್ಯಾಲಯ ನಾಳೆ ನಡೆಯುವ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದೆ. ಆ ಸಂದರ್ಭದ ನೆಪದಲ್ಲಿ ಕವಿವಿ ಒಂದು ಸಾರ್ವಜನಿಕ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.
ಮಧ್ಯಾಹ್ನ ನಾಲ್ಕೂವರೆಯಿಂದ ಸುಮಾರು ಒಂದೂವರೆ ತಾಸು ಸಿನೆಟ್ ಹಾಲಿನಲ್ಲಿ ಭೈರಪ್ಪ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದ ನಂತರ ಹೋಗಿ ನಮಸ್ಕಾರ ಎಂದೆ. ಮುಂದಿನ ಕಾರ್ಯಕ್ರಮವೇನು ಎಂದು ಕೇಳಿದೆ! ನನಗೇನೂ ಗೊತ್ತಿಲ್ಲ ಎಂದರು. ಸರಿ ಹಾಗಾದರೆ ನನ್ನ ಜೊತೆಗೆ ಬರುವಿರಾ ಎಂದು ಕೇಳಿದೆ! ನಡೆಹೋಗೋಣ ಎಂದರು! ಸರಿ ಎಂದವನೇ ಕಾರಲ್ಲಿ ಕುಳಿತುಕೊಳ್ಳಿ ಎಂದೆ! ಸಂಘಟಕರು ಕಕ್ಕಾಬಿಕ್ಕಿ! ಯಾರಿವನು ಅಪರಿಚಿತ ಹುಡುಗ! ಎಲ್ಲರನ್ನೂ ಬಿಟ್ಟು ಇವನೊಂದಿಗೆ ಹೊರಟರಲ್ಲ ಭೈರಪ್ಪ! ಎಂದುಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡು ಮನದಲ್ಲೇ ನಕ್ಕೆ!
ಸುಲ್ತಾನ್ ಖಾನರ ಸಾರಂಗಿಯಲ್ಲಿ ರಾಗೆಶ್ರಿ ರಾಗ ಹಿತವಾಗಿ ಕೇಳಿಬರುತ್ತಿತ್ತು. ಕಾರು ಹೊರಟಿದ್ದೆಲ್ಲಿಗೆ, ಏನು ಎಂತ... ಒಂದು ಮಾತೂ ಕೇಳದೆ ನಾದದಲ್ಲಿ ತಲ್ಲೀನರಾದರು ಭೈರಪ್ಪ. ನಾನೂ ಸುಮ್ಮನೆ ಡ್ರೈವ್ ಮಾಡುತ್ತಿದ್ದೆ. ಸಾಧನಕೇರಿಗೆ ಬಂದು ತಲುಪಿದೆವು. ಕರೆಯೇರಿಗುಂಟ ನಡೆಯುತ್ತಿದ್ದೆವು ಒಬ್ಬ ಓದುಗ ಅವರನ್ನು ಯುನಿವರ್ಸಿಟಿಯಿಂದಲೂ ಹಿಂಬಾಲಿಸುತ್ತಿದ್ದ! ನಮಸ್ಕಾರ ಸರ್, ನಾನು ನಿಮ್ಮ ಅಭಿಮಾನಿ ಎಂದ. ಅಲ್ಲಿಯವರೆಗೂ ಮೌನಿಯಾಗಿದ್ದ ಭೈರಪ್ಪ ಮುಖ ಸಡಿಲಿಸಿ ನಕ್ಕರು! ಸಾಹಿತ್ಯದಿಂದ ಸಮಾಜೋದ್ಧಾರ ಸಾಧ್ಯವಿಲ್ಲ ಎಂದು ಒಂದು ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದು ನನಗೇಕೋ ಸರಿ ಎನಿಸಲಿಲ್ಲ. ನಿಮ್ಮ ಕಾದಂಬರಿಗಳನ್ನು ಓದಿಯೇ ನಾನು ಜೀವನದಲ್ಲಿ ಸುಧಾರಿಸಿದ್ದೇನೆ, ಬದಲಾಗಿದ್ದೇನೆ ಎಂದ! ಎಂದವನೇ ಕೈಮುಗಿದ... ಬರುತ್ತೇನೆ ಸರ್... ಎಂದು ಹಿಂತಿರುಗಿ ಹೋದ! ಮತ್ತೆ ಮೌನ ಆವರಿಸಿತು. ದಾರಿ ಸಾಗುತ್ತಿತ್ತು.
ಬಾಯಲ್ಲಿ ಗುನುಗುನಿಸುತ್ತಿದ್ದ ರಾಗದ ಛಾಯೆಯ ಗುರುತಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಬರಹಗಾರರಿಗೆ, ಕಲಾವಿದರಿಗೆ ಕಾರ್ಯಕ್ರಮದ ನಂತರ ಒಂದು ರೀತಿಯ ಏಕಾಂತ ಬೇಕಾಗುತ್ತದೆ,ಮೌನ ಬೇಕಾಗುತ್ತದೆ ಎಂದು ನನ್ನ ಗುರುಗಳು ಹೇಳುತ್ತಿದ್ದುದು ನನ್ನ ಅನುಭವದಿಂದ ಮನದಟ್ಟಾಗಿತ್ತು! ಹಾಗಾಗಿ ನಾನೂ ಅವರ ಸಾಂಗತ್ಯ -ಸಾಮೀಪ್ಯವನ್ನು ಆನಂದಿಸುತ್ತಾ ವಾಕಿಂಗಿನ ಲಯದ ಲೆಕ್ಕಾಚಾರದಲ್ಲಿ ಸಂ ಹುಡುಕುತ್ತಿದ್ದೆ! ಹುಸಿ ಹೋದದ್ದೇ ಗೊತ್ತಾಗಲಿಲ್ಲ!
'ಭಜ ಮನ ಕರುಣಾ ನಿಧಾನ ಸುಖಸಂಪದ ಏಕ ಧಾಮ' ಮಧ್ಯಾಲಯ ಏಕತಾಲದಲ್ಲಿ ಯಮನ್ ರಾಗ ಕೇಳಿಬರುತ್ತಿತ್ತು. ಆಗಾಗ್ಗೆ, ಹಾ ಎಂದು ತಲೆಯಾನಿಸುತ್ತಿದ್ದರು ಭೈರಪ್ಪ! ಕಾರು ಕೆಲಗೇರಿ ಕೆರೆಯ ಹತ್ತಿರ ಸಾಗಿತು! ದಂಡೆಗುಂಟ ಸುಮಾರು ಎರಡು ಕಿಲೋಮೀಟರ ದೂರ ಕ್ರಮಿಸಿದ ಮೇಲೆ ಸಾಕು ನಡೆ ಹೋಗೋಣ ಎಂದರು! ತಿರುಗಿ ಕಾರಿನಲ್ಲಿ ಯಮನ್ ಕೇಳುತ್ತಾ ನಿರ್ಮಲ ನಗರದ ನಮ್ಮ ಮನೆಯ ಹತ್ತಿರ ಬಂದೆವು. ಸಖಿ ಗೀತ ಕಾಯುತ್ತಿದ್ದಳು ಆತಂಕದಿಂದ! 'ಊರಿಂದ ಮಧ್ಯಾಹ್ನವಷ್ಟೇ ಬಂದಿದ್ದು. ಮನೆಯಲ್ಲಿ ಏನೇನೂ ತಯಾರಿ ಇಲ್ಲ. ಇವನ ಹುಚ್ಚಾಟ ಬೇರೆ.... ಭೈರಪ್ಪ ಬರುತ್ತಾರೆಂದರೆ ಊಟಕ್ಕೇನು ಮಾಡುವುದು?' ಕರಂಟ್ ಬೇರೆ ಇರ್ಲಿಲ್ಲ ಮನೆಯಲ್ಲಿ. ಮೂರ್ತಿ ತರಕಾರಿ ಮೊಸರು ಎಲ್ಲ ತಂದ! ಕಾರಲ್ಲಿಯೇ ಕುಂತು ಫೋನಲ್ಲಿಯೇ ಎಲ್ಲ ಪ್ಲಾನ್ ಮಾಡಿ ರಾತ್ರಿಯೂಟಕ್ಕೆ ಸಲಾಡ್,ರೋಟಿ, ಮೊಸರು ಸಿಂಪಲ್ ಊಟದ ಮೆನುಕೊಟ್ಟಿದ್ದೆ! ಅದೆಷ್ಟು ಬೈದುಕೊಂಡಳೋ!
ಸರ್ ಮನೇಲಿ ಕರೆಂಟಿಲ್ಲ! ಇನ್ನೊಂದು ಕಡೆಗೆ ಕರೆದುಕೊಂಡು ಹೋಗಲಾ? ಗುಡ್ಡದ ನೆತ್ತಿಯೇರಿ ಕತ್ತಲೆಯಲ್ಲಿ ಕಾರಿನ ಬಾಗಿಲು ತೆರೆದು ಸಂಗೀತ ಕೇಳೋಣವೆ? ಸರಿ ನಡೆ ಎಂದರು!ಟೈವಾಕ್ ಗುಡ್ಡದಮೇಲೆ ಕಗ್ಗತ್ತಲಲ್ಲಿ "ಮಾನೇನಾ ಜಿಯರಾ ತುಮ ಬಿನ" ಹಾಸಣಗಿ ಗಣಪತಿ ಭಟ್ಟರ ಇಂಪಾದ ದನಿಯಲ್ಲಿ ಭಾಗೆಶ್ರೀ ಬಹಾರ್ ರಾಗ ಕಳೆಕಟ್ಟಿ ರಂಗೇರಿತ್ತು. ಭೈರಪ್ಪ ಖುಷ್ ಆಗಿದ್ರು! ಅದಾಗಲೇ ಗಂಟೆ ರಾತ್ರಿ ಎಂಟು!
ಮನೆಗೆ ಹೋದೆವು. ಭೈರಪ್ಪ ಫ್ರೆಶ್ ಆಗಿದ್ದರು!ಮಾತಿಗೆ ತೊಡಗಿದರು ನೋಡಿ... ಫಿಲೊಸೊಫಿ.....ಭಾರತೀಯ ಸಾಹಿತ್ಯ ದರ್ಶನ.... ಅನುಭೂತಿ...ಅನುಭಾವ.... ನಿಜವಾಗಿಯೂ ರಸದೌತಣ! ರಾತ್ರಿ ಹತ್ತು ಹೊಡೆದರೂ ಪರಿವೆಯಿಲ್ಲ ಯಾರಿಗೂ! ಮೊದಲು ನನ್ನ ಹುಚ್ಚಾಟಕ್ಕೆ ಬೈದಿದ್ದ ಗೆಳತಿ ಈಗ ನನಗೊಂದು ಫ್ಲಾಯಿಂಗ್ ಕಿಸ್ ಕೊಟ್ಟು ಪಾತ್ರೆತೊಳೆಯಲು ಬಾರೋ ಎಂದು ಗೋಗರೆಯುತ್ತಿದ್ದಾಳೆ!

18 comments:

 1. Its been ages that i have seen him. I still remember when he was there at home for a week like one of us.. Thank you for sharing the snaps and again wonderful article...!!!U made my day!!

  ReplyDelete
 2. ವಸಂತಣ್ಣ...
  ಮೌನ ಗೀತ , ಭೈರಪ್ಪನವರು , ಭಟ್ಟರ ಭಾಗೇಶ್ರೀ ಬಹಾರ್ ರಾಗ ಎಲ್ಲವೂ ಇಷ್ಟವಾದವು. ತುಂಬ ದಿನಗಳ ನಂತರ ಗೀತಕ್ಕ ಹೀಗೆ ಗುಡ್ಡದ ನೆತ್ತಿಯಲ್ಲಿ ಚೆಂದದ ಮೌನದೊಡನೆ ಸಿಕ್ಕಿದಂತೆ ಖುಷಿಯಾಗಿದೆ. ಭೈರಪ್ಪ ಆಗಲೇ ಹೊರಟುಹೋದರೂ, ನೀವು ಮತ್ತು ಗೀತಕ್ಕ ಪಾತ್ರೆ ತೊಳೆಯುತ್ತಿದ್ದರೂ ನಾನಿನ್ನೂ ಗುಡ್ಡದ ನೆತ್ತಿಯಲ್ಲೇ ಇದ್ದೇನೆ.

  ನಿಜದಲ್ಲಿಯೂ ಇವತ್ತು ಮನೆಯ ಹತ್ತಿರದ ಗುಡ್ಡವೊಂದನ್ನು ಕಾಲ್ನಡಿಗೆಯಲ್ಲಿ ನಾಲ್ಕು ಮೈಲಿ ಹತ್ತಿ ನಾಲ್ಕು ಮೈಲಿ ಇಳಿದು ಬಂದ ಖುಷಿಯಲ್ಲಿ ಓದಲು ಕುಳಿತರೆ ಇಲ್ಲಿ ಚೆಂದದ ಇಂಥ ಲೇಖನದೊಳಗೆ ಭೈರಪ್ಪನವರ ಜೊತೆ ಗೀತಕ್ಕಳನ್ನೂ ಕಂಡ ಖುಷಿ ನನ್ನದಾಗಿದೆ. ಧನ್ಯವಾದ.

  ReplyDelete
 3. ಒಳ್ಳೆಯ ಲೇಖನ..
  ಧನ್ಯವಾದಗಳು.

  ReplyDelete
 4. ನಾನು ಭೈರಪ್ಪನವರ ಕಟ್ಟಾ ಅಭಿಮಾನಿ, ಅವರ ನೇರ ನಡೆನುಡಿಗೆ ಶರಣು !ಲೇಖನ ಉಪಯುಕ್ತ ! ಧನ್ಯವಾದಗಳು

  ReplyDelete
 5. Bhairappa tumba saralswabhaavadavau! nera nudiya satyada pratipaadaka. hosadaagi satyada anveshanege holahu kottavaru! satyada mukhamukhige ondu dharstya bekennuvavvaru. avra sahavaasavendare halavaaru jnaanashaakhegalannu ekakaalakke teredu toruva jnaana bhandaaradante! thanks for the comments from Smita,Shantala,Manamukta and V R Bhat.

  ReplyDelete
 6. ಅಬ್ಬ!! ಒಮ್ಮೆಲೆ ರಾಗಗಳಲ್ಲಿ, ಬೈರಪ್ಪನವರ ಬರಹಗಳಲ್ಲಿ ವಿಹರಿಸಿದಂತಾಯಿತು.ಧನ್ಯವಾದಗಳು.

  ReplyDelete
 7. vasantanna neene dhanya:) matte ninna last post kavana kooda chennagiddu.sikkapatte bhaara iddu.nanginnoo adu poortiyaagi dakkiddille ankanji. innoo onderadu sala oadavu:)

  ReplyDelete
 8. maani bhaava! thanks for ur comments!

  ReplyDelete
 9. ಚೆಂದದ ಬರಹ! ನಂತರ ಸಖಿ ಗೀತಂಗೆ ಪಾತ್ರೆ ತೊಳೆದು ಕೊಟ್ಟಿರಿ ತಾನೆ..? :-)

  ReplyDelete
 10. We believe in and leave sarvarigoo samabaalu sarvarigoo samapaalu! samaajavaadi tatva! Ha haha..hahahaha

  ReplyDelete
 11. Thanks for the appreciation Purnima.

  ReplyDelete
 12. ಭೈರಪ್ಪನರೊಡನೆ ನೀವು ಕಳೆದ ಹೊತ್ತು ನಿಜಕ್ಕೂ ಅಪೂರ್ವ...ಆ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು

  ReplyDelete
 13. This comment has been removed by a blog administrator.

  ReplyDelete
 14. This comment has been removed by a blog administrator.

  ReplyDelete
 15. ವಸಂತ್,
  ನಿನ್ನ ಒಂದು ಚಿಕ್ಕ ಲೇಖನದಲ್ಲಿ,
  ಸುಲ್ತಾನ್ ಖಾನರ ರಾಗೆಶ್ರಿ, ಹೇರಂಬಣ್ಣನ ಭಾಗೆಶ್ರೀ ಬಹಾರ್, ಹಾಗು ಭೈರಪ್ಪನವರ ದಿವ್ಯ ಮೌನವನ್ನ
  ನೆನಪಿಸಿದ್ದಕ್ಕೆ ತುಂಬಾ ಖುಷಿ ಆತು. ಜೊತೆಗೆ, ನೆನಪುಮಾಡಿಕೊಂಡಾಗ ಮಾತ್ರ ಬರುವ ಗೀತ,
  ಕಣ್ಣೆದುರು ಕಂಡಿದ್ದಕ್ಕೂ ಬಹಳ ಸಂತೋಷ ಆತು. ವಸಂತ,'' ಭಜಮನ ಕರುಣಾ ನಿಧಾನ ......'' ಚೀಸ್ ನ್ನ,
  ಮತ್ತೆ ಬೇರೆ ಯಾರದ್ರೂ ಹಾಡಿದ್ವನ?

  ReplyDelete
 16. I have not heard this bandish from anybody else. Thanks umakka for your spandane!

  ReplyDelete