ಬ್ರಹ್ಮಾಂಡ
ವಿಸ್ತಾರದ ಕ್ಷೇತ್ರ
ಪಿಂಡಾಂಡದಲ್ಲಿಹುದು
ಅದರ
ಅಂಡಾಣು,
ಪ್ರೊಟಾನು ನ್ಯೂಟ್ರಾನು
ಎಲೆಕ್ಟ್ರಾನು
ಸುತ್ತಿಸುಳಿವ
ಸಂಬಂಧ
ಶಕ್ತಿಮೈತ್ರಿ
ನಾನೋ
ಅದರೊಳಗಿನ ಅಣುರೇಣು
ಹತ್ತಿಯ
ಹಗುರಿನವನು
ಹಾರಾಡುತ್ತೇನೆ
ಬೇಕಾಬಿಟ್ಟಿ
ನಿಯಮಗಳ
ತೂರಿ
ಗಾಳಿಗೋಪುರ
ಕಟ್ಟಿ
ಮರಳಲ್ಲಿ
ಮನೆಕಟ್ಟಿ
ಮರುಳಾಗಿ
ಸುಖಿಸುತಿಹೆ
ಅಲೆಮಾರಿಯಂತೆ
ಸತ್ಯ-ಅಸತ್ಯ
ಎಲ್ಲವೂ ಒಂದೇ
ಶಿವ-ಸುಂದರ
ನನಗೆಂದೂ
ವಂದೇ
ವಿಲಕ್ಷಣದಲ್ಲಿ
ಲಕ್ಷಣವ ಹುಡುಕುತ್ತ
ತಿರುಮುರುವಾಗುತ್ತ
ಆನಂದ
ಪಡೆವುದೇ
ಸಚ್ಚಿದಾನಂದ
ಎಂದರೂ
ಬ್ರಹ್ಞಾಂಡ ವಿಸ್ತಾರದ ಕ್ಷೇತ್ರ!
- ವಸಂತ, 10-ಸಪ್ಟೆಂಬರ್ 2012
- ವಸಂತ, 10-ಸಪ್ಟೆಂಬರ್ 2012
No comments:
Post a Comment