Showing posts with label ಮಗನೆ ನಿನಗಾಗಿ. Show all posts
Showing posts with label ಮಗನೆ ನಿನಗಾಗಿ. Show all posts

Saturday, March 6, 2010

ಬೆಳಗು


ಅಮ್ಮ....ಅಮ್ಮ...ಅಮ್ಮಾ
ನನ್ನ ಮುದ್ದು ಅಮ್ಮ!
ಮೇಲೆನೋಡು ಚಂದಿರ
ಮುಗಿಲ ತಾರೆ ಸುಂದರ!
ಹಕ್ಕಿಯೇಕೆ ಹಾರುತಿಲ್ಲ?
ಸೂರ್ಯನೇಕೆ ಕಾಣುತಿಲ್ಲ?
ಕತ್ತಲೇಕೆ ಸುತ್ತಲೆಲ್ಲ?
ಹೇಳೆ ಮುದ್ದು ಅಮ್ಮ.
ಮೇಲೆ ಮುಗಿಲು ಕೆಳಗೆ ಭೂಮಿ
ಗಿರಗಿರ ಗಿರಗಿಟ್ಟಿ ಬುಗುರಿಯಂತೆ
ತಿರುಗಿ ತಿರುಗಿ ಹಗಲುರಾತ್ರಿ ಹುಟ್ಟಿ
ಹಗಲು ಸೂರ್ಯ ರಾತ್ರಿ ಚಂದ್ರ
ಪಾಳಿಯಲ್ಲಿ ಬರುವರು.
ಸೂರ್ಯ ರಶ್ಮಿ ಚಂದ್ರ ಕಾಂತಿಯಿತ್ತು
ನಮ್ಮ ಪೊರೆವರು.
ನನ್ನ ಪುಟ್ಟಕಂದ ಕೇಳು
ಹಿಂಡುಹಿಂಡು ಹಕ್ಕಿಹಿಂಡು
ಬೆಳಕು ಹರಿಯೆ ಬರುವವು
ಹರುಷವನ್ನೆ ತರುವವು.
ಮುಂದೆಮುಂದೆ ಕುರಿಯ ಮಂದೆ
ಹಿಂದೆಹಿಂದೆ ದನದ ದಂಡು
ಸೂರ್ಯಪೂರ್ವದಲ್ಲಿ ಬಂದು
ನಿನ್ನ ಕರೆದು ಹೇಳ್ವನು
ಏಳುಕಂದ ಏಳುಕಂದ
ಬೆಳಗು ಹರಿಯಿತೇಳು ಕಂದ
ಕಣ್ಣುತೆರೆದು ನೋಡು ಚೆಂದ!