ಅಮ್ಮ....ಅಮ್ಮ...ಅಮ್ಮಾ
ನನ್ನ ಮುದ್ದು ಅಮ್ಮ!
ಮೇಲೆನೋಡು ಚಂದಿರ
ಮುಗಿಲ ತಾರೆ ಸುಂದರ!
ಹಕ್ಕಿಯೇಕೆ ಹಾರುತಿಲ್ಲ?
ಸೂರ್ಯನೇಕೆ ಕಾಣುತಿಲ್ಲ?
ಕತ್ತಲೇಕೆ ಸುತ್ತಲೆಲ್ಲ?
ಹೇಳೆ ಮುದ್ದು ಅಮ್ಮ.
ಮೇಲೆ ಮುಗಿಲು ಕೆಳಗೆ ಭೂಮಿ
ಗಿರಗಿರ ಗಿರಗಿಟ್ಟಿ ಬುಗುರಿಯಂತೆ
ತಿರುಗಿ ತಿರುಗಿ ಹಗಲುರಾತ್ರಿ ಹುಟ್ಟಿ
ಹಗಲು ಸೂರ್ಯ ರಾತ್ರಿ ಚಂದ್ರ
ಪಾಳಿಯಲ್ಲಿ ಬರುವರು.
ಸೂರ್ಯ ರಶ್ಮಿ ಚಂದ್ರ ಕಾಂತಿಯಿತ್ತು
ನಮ್ಮ ಪೊರೆವರು.
ನನ್ನ ಪುಟ್ಟಕಂದ ಕೇಳು
ಹಿಂಡುಹಿಂಡು ಹಕ್ಕಿಹಿಂಡು
ಬೆಳಕು ಹರಿಯೆ ಬರುವವು
ಹರುಷವನ್ನೆ ತರುವವು.
ಮುಂದೆಮುಂದೆ ಕುರಿಯ ಮಂದೆ
ಹಿಂದೆಹಿಂದೆ ದನದ ದಂಡು
ಸೂರ್ಯಪೂರ್ವದಲ್ಲಿ ಬಂದು
ನಿನ್ನ ಕರೆದು ಹೇಳ್ವನು
ಏಳುಕಂದ ಏಳುಕಂದ
ಬೆಳಗು ಹರಿಯಿತೇಳು ಕಂದ
ಕಣ್ಣುತೆರೆದು ನೋಡು ಚೆಂದ!
ನನ್ನ ಮುದ್ದು ಅಮ್ಮ!
ಮೇಲೆನೋಡು ಚಂದಿರ
ಮುಗಿಲ ತಾರೆ ಸುಂದರ!
ಹಕ್ಕಿಯೇಕೆ ಹಾರುತಿಲ್ಲ?
ಸೂರ್ಯನೇಕೆ ಕಾಣುತಿಲ್ಲ?
ಕತ್ತಲೇಕೆ ಸುತ್ತಲೆಲ್ಲ?
ಹೇಳೆ ಮುದ್ದು ಅಮ್ಮ.
ಮೇಲೆ ಮುಗಿಲು ಕೆಳಗೆ ಭೂಮಿ
ಗಿರಗಿರ ಗಿರಗಿಟ್ಟಿ ಬುಗುರಿಯಂತೆ
ತಿರುಗಿ ತಿರುಗಿ ಹಗಲುರಾತ್ರಿ ಹುಟ್ಟಿ
ಹಗಲು ಸೂರ್ಯ ರಾತ್ರಿ ಚಂದ್ರ
ಪಾಳಿಯಲ್ಲಿ ಬರುವರು.
ಸೂರ್ಯ ರಶ್ಮಿ ಚಂದ್ರ ಕಾಂತಿಯಿತ್ತು
ನಮ್ಮ ಪೊರೆವರು.
ನನ್ನ ಪುಟ್ಟಕಂದ ಕೇಳು
ಹಿಂಡುಹಿಂಡು ಹಕ್ಕಿಹಿಂಡು
ಬೆಳಕು ಹರಿಯೆ ಬರುವವು
ಹರುಷವನ್ನೆ ತರುವವು.
ಮುಂದೆಮುಂದೆ ಕುರಿಯ ಮಂದೆ
ಹಿಂದೆಹಿಂದೆ ದನದ ದಂಡು
ಸೂರ್ಯಪೂರ್ವದಲ್ಲಿ ಬಂದು
ನಿನ್ನ ಕರೆದು ಹೇಳ್ವನು
ಏಳುಕಂದ ಏಳುಕಂದ
ಬೆಳಗು ಹರಿಯಿತೇಳು ಕಂದ
ಕಣ್ಣುತೆರೆದು ನೋಡು ಚೆಂದ!
hmmm nice vasantanna:)
ReplyDeleteಭಾವತು೦ಬಿದ ಆಶಾವಾದಿ ಕವನ..
ReplyDeleteತು೦ಬಾ ಚೆನ್ನಾಗಿದೆ.
Good navya kaavya !
ReplyDeleteಚೆನ್ನಾಗಿದೆ ಕವನ. ಮಕ್ಕಳ ಗೀತೆಗಳು ತುಂಬಾ ಕಡಿಮೆಯಿವೆ ಈಗ. ಇಂತಹ ಉತ್ತಮ
ReplyDeleteಗೀತೆಗಳು ನಿಮ್ಮಿಂದ ಇನ್ನಷ್ಟು ಬರಲಿ.
Goutam,Manmukta,V R Bhatru, Subrhmanya ellarigo thanks. Matte mundinavaara hosa post maadalu prayatnisuve.
ReplyDeleteಚೆನ್ನಾಗಿದೆ ಕವನ
ReplyDeleteಕಂದನನ್ನು ಕಂಡು ಒಂದು ಕವನ ಮೂಡಿದೆ! ಕಂದನಷ್ಟೇ ಮುದ್ದಾಗಿ ಮೋಡಿ ಮಾಡಿದೆ!
ReplyDeleteolleya kavana...hige bareyutta iri..
ReplyDeleteNimmava,
Raaghu.
Kuusu Muliyala, DTK and Raghu thanks for the reading and commenting.
ReplyDeletetumba chennagide sir.
ReplyDeletebelagaayite endu kanda kannu teredu noduvaduu chendave... chennagide kandana prasne...
ReplyDelete