ನನ್ನ ಮಗ ತೇಜಸ್ವಿ ಕಾರ್ಟೂನ್ ನೆಟ್ವರ್ಕ್ ಕಣ್ಬಿಟ್ಕಂಡ್ ನೋಡ್ತಾನೆ. ಅಲ್ಲಿ ಟೊಮ್ ಮತ್ತೆ ಜೆರ್ರಿ ಬರ್ತದಲ್ಲ ಅದನ್ ನೋಡ್ಕ್ಯಂಡು ಒಂದಿನ ಹೇಳ್ದಾ..... "ಅಪ್ಪಾ! ನೀನು ಟೊಮ್ ನಾನು ಜೆರ್ರಿ" ಎಂದು! ಅವನ ಕ್ರಿಯೆಟಿವಿಟಿಗೆ ಮಂತ್ರಮುಗ್ಧನಾದೆ! ಅದನ್ನು ಒಂದು ಪದ್ಯವಾಗಿಸಿದೆ !
ಅಪ್ಪಾ ನೀನು ಟೊಮ್!
ಟೊಮ್ ಟೊಂ ತೋಂ
ಟಬ್ಬಲಿ ಒಂದು ಬೊಬ್ಬಿಲಿ
ಹಿಡಿಯಲು ಬಂದರೆ ಹೆಬ್ಬುಲಿ
ಸಿಕ್ಕದು ಎಂದೂ ಚಿಕ್ಕಿಲಿ
ಚಿಕ್...ಚಿಕ್...ಚಿಕ್...ಚೆಂದಿಲಿ!
ನಾನೂ ಒಂದು ಜೆರ್ರಿಲಿ
ಬಿಟ್ಟರೆ ಸಿಕ್ಕಾ ಜಂಗಲಿ
ಸಿಕ್ಕರೆ ಪಕ್ಕಾ ಮಂಗಿಲಿ
ಬಾರೋ..ಬಾ...ಬಾ..ಸಂದಿಲಿ!
ಅಕ್ಕಾ-ಪಕ್ಕಾ, ಚಿಕ್ಕ-ಚೊಕ್ಕ
ಮನೆಯಲಿ ಯಾರೂ ಕೇಳೋರಿಲ್ಲ
ಸಿಕ್ಕದ್ದೆಲ್ಲ ನಂದೇ ಎಂದು
ಬಿಡದೇ ತಿಂದೆ ಎಲ್ಲಾ ಉಂಡೆ!
ನೀನು ಬಂದೆ...ಗಡಿಬಿಡಿ ಬಂಡೆ
ಬಾಯಿಂದ್ಬಿತ್ತು ಬೇಸಿನ್ ಉಂಡೆ
ತಡವರಿಸಿತ್ತು ಡಬ್ಬದ ಕುಂಡೆ
ಟೊಮ್...ಟೊಂ....ತೊಂ!
ಅಪ್ಪಾ ನೀನು ಟೊಮ್
ಟೊಮ್...ಟೊಂ....ತೊಂ!
ಅಪ್ಪಾ ನೀನು ಟೊಮ್!
ಟೊಮ್ ಟೊಂ ತೋಂ
ಟಬ್ಬಲಿ ಒಂದು ಬೊಬ್ಬಿಲಿ
ಹಿಡಿಯಲು ಬಂದರೆ ಹೆಬ್ಬುಲಿ
ಸಿಕ್ಕದು ಎಂದೂ ಚಿಕ್ಕಿಲಿ
ಚಿಕ್...ಚಿಕ್...ಚಿಕ್...ಚೆಂದಿಲಿ!
ನಾನೂ ಒಂದು ಜೆರ್ರಿಲಿ
ಬಿಟ್ಟರೆ ಸಿಕ್ಕಾ ಜಂಗಲಿ
ಸಿಕ್ಕರೆ ಪಕ್ಕಾ ಮಂಗಿಲಿ
ಬಾರೋ..ಬಾ...ಬಾ..ಸಂದಿಲಿ!
ಅಕ್ಕಾ-ಪಕ್ಕಾ, ಚಿಕ್ಕ-ಚೊಕ್ಕ
ಮನೆಯಲಿ ಯಾರೂ ಕೇಳೋರಿಲ್ಲ
ಸಿಕ್ಕದ್ದೆಲ್ಲ ನಂದೇ ಎಂದು
ಬಿಡದೇ ತಿಂದೆ ಎಲ್ಲಾ ಉಂಡೆ!
ನೀನು ಬಂದೆ...ಗಡಿಬಿಡಿ ಬಂಡೆ
ಬಾಯಿಂದ್ಬಿತ್ತು ಬೇಸಿನ್ ಉಂಡೆ
ತಡವರಿಸಿತ್ತು ಡಬ್ಬದ ಕುಂಡೆ
ಟೊಮ್...ಟೊಂ....ತೊಂ!
ಅಪ್ಪಾ ನೀನು ಟೊಮ್
ಟೊಮ್...ಟೊಂ....ತೊಂ!
ವಸಂತಣ್ಣ...
ReplyDelete"ಬಾಯಿಂದ್ಬಿತ್ತು ಬೇಸನ್ ಉಂಡೆ
ತಡವರಿಸಿತ್ತು ಡಬ್ಬದ ಕುಂಡೆ"
"ಅಪ್ಪಾ! ನೀನು ಟೊಮ್ ನಾನು ಜೆರ್ರಿ"
ಮಕ್ಕಳಮಾತು, ಅವರ ಯೋಚನೆಗಳು, ಅವರ ಆಟಪಾಠವೇ ಒಂದು ಕಾವ್ಯದಹಾಗೆ.
ಓದಿಕೊಂಡವರೇ ಪುಣ್ಯವಂತರು.
ಮಕ್ಕಳ ಜೊತೆ ಮಕ್ಕ್ಕಳಾಗುವ ನಿಮ್ಮ ಪರಿ ತು೦ಬಾ ಹಿಡಿಸಿತು.
ReplyDeleteಅಬ್ಬ ಅಂತು ಎನ್ನ ಜೊತೆ ನೀನೂ ಒಬ್ಬವ ಸಿಕ್ದೇ.ಇನ್ನೂ ಈ ಟೈಪ್ ಟ್ರೈ ಮಾಡು ಪ್ಲೀಸ್ ...:)
ReplyDeleteGood! Maguvina Haadu chennagide
ReplyDeletehahahahahha superb....
ReplyDeleteನೀನು ಟಾಮ್ .ನಾನು ಜೆರಿ .ಬಾ ಆಡೋಣ ನಾವಿಬ್ಬರು ಟಾಮ್ ಅಂಡ್ ಜೆರಿ.ಮಕ್ಕಳ ಜೊತೆ ಮಕ್ಕಳಾದರೆ ಇನ್ನೆಲ್ಲಿ ವರಿ ?ಕವಿತೆಯಲ್ಲಿ ಹೊಸ ರೀತಿಯ ಕ್ರಿಯೇಟಿವಿಟಿ ಇದೆ .ರಾಶಿ ಖುಷಿ ಕೊಟ್ಟಿದೆ .
ReplyDeleteShantala,Kussu,goutam,V R Bhatre,Jyoti,Dr.D.T.Krishnamurthy ellarigoo thanks a lot for encouragement.
ReplyDeleteNice one vasant Bhava..
ReplyDelete