Showing posts with label ಮಗನೇ ನಿನಗಾಗಿ. Show all posts
Showing posts with label ಮಗನೇ ನಿನಗಾಗಿ. Show all posts

Tuesday, March 2, 2010

ಅಪ್ಪಾ ನೀನು ಟೊಮ್!ಟೊಮ್ ಟೊಂ ತೋಂ!


ನನ್ನ ಮಗ ತೇಜಸ್ವಿ ಕಾರ್ಟೂನ್ ನೆಟ್ವರ್ಕ್ ಕಣ್ಬಿಟ್ಕಂಡ್ ನೋಡ್ತಾನೆ. ಅಲ್ಲಿ ಟೊಮ್ ಮತ್ತೆ ಜೆರ್ರಿ ಬರ್ತದಲ್ಲ ಅದನ್ ನೋಡ್ಕ್ಯಂಡು ಒಂದಿನ ಹೇಳ್ದಾ..... "ಅಪ್ಪಾ! ನೀನು ಟೊಮ್ ನಾನು ಜೆರ್ರಿ" ಎಂದು! ಅವನ ಕ್ರಿಯೆಟಿವಿಟಿಗೆ ಮಂತ್ರಮುಗ್ಧನಾದೆ! ಅದನ್ನು ಒಂದು ಪದ್ಯವಾಗಿಸಿದೆ !
ಅಪ್ಪಾ ನೀನು ಟೊಮ್!
ಟೊಮ್ ಟೊಂ ತೋಂ
ಟಬ್ಬಲಿ ಒಂದು ಬೊಬ್ಬಿಲಿ
ಹಿಡಿಯಲು ಬಂದರೆ ಹೆಬ್ಬುಲಿ
ಸಿಕ್ಕದು ಎಂದೂ ಚಿಕ್ಕಿಲಿ
ಚಿಕ್...ಚಿಕ್...ಚಿಕ್...ಚೆಂದಿಲಿ!
ನಾನೂ ಒಂದು ಜೆರ್ರಿಲಿ
ಬಿಟ್ಟರೆ ಸಿಕ್ಕಾ ಜಂಗಲಿ
ಸಿಕ್ಕರೆ ಪಕ್ಕಾ ಮಂಗಿಲಿ
ಬಾರೋ..ಬಾ...ಬಾ..ಸಂದಿಲಿ!
ಅಕ್ಕಾ-ಪಕ್ಕಾ, ಚಿಕ್ಕ-ಚೊಕ್ಕ
ಮನೆಯಲಿ ಯಾರೂ ಕೇಳೋರಿಲ್ಲ
ಸಿಕ್ಕದ್ದೆಲ್ಲ ನಂದೇ ಎಂದು
ಬಿಡದೇ ತಿಂದೆ ಎಲ್ಲಾ ಉಂಡೆ!
ನೀನು ಬಂದೆ...ಗಡಿಬಿಡಿ ಬಂಡೆ
ಬಾಯಿಂದ್ಬಿತ್ತು ಬೇಸಿನ್ ಉಂಡೆ
ತಡವರಿಸಿತ್ತು ಡಬ್ಬದ ಕುಂಡೆ
ಟೊಮ್...ಟೊಂ....ತೊಂ!
ಅಪ್ಪಾ ನೀನು ಟೊಮ್
ಟೊಮ್...ಟೊಂ....ತೊಂ!