Friday, February 28, 2014

'Onde baari nanna nodi!' D.R.Bendre... suggested by Gelati Geeta!


I am lost in the lyric.......


ಒಂದೇ ಬಾರಿ ನನ್ನ ನೋಡಿ

ಒಂದೇ ಬಾರಿ ನನ್ನ ನೋಡಿ
ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ

ಗಾಳಿಹೆಜ್ಜೆ ಹಿಡಿದ ಸುಗಂಧ
ಅತ್ತ ಅತ್ತ ಹೋಗುವಂದ
ಹೋತ ಮನಸು ಅವನ ಹಿಂದ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ
ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನ ನನಗ?
ಒಂದು ಅಳತಿ ನಡೆದದ ಚಿತ್ತ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ

ಸೂಜಿ ಹಿಂದ ದಾರದ್ಹಾಂಗ
ಕೊಳದೊಳಗ ಜಾರಿದ್ಹಾಂಗ
ಹೋತ ಹಿಂದ ಬಾರದ್ಹಾಂಗ
ಹಿಂದ ನೋಡದಾ ಗೆಳತಿ
ಹಿಂದ ನೋಡದಾ
           -ದತ್ತಾತ್ರೇಯ ರಾಮಚಂದ್ರ ಬೇಂದ್ರೆ
Looking at me only once

Looking at me only once
Like a mild smile on his lips;
Charging his foots step by step;
He went away, away and away
Without looking back,
Oh! My friend!

Like fragrance;
Following the footprints
Of the breeze
Sailed towards him
Without looking back,
Oh! My friend!

I am lost! Became insentient!
Why should I bother others?
Psyche is moving at a speed
Without looking back,
Oh! My friend!

Like yarn
 Behind the needle,
Slipped into a loch
It went away without
Coming back!
Without looking back,
Oh! My friend!

(Translation: Vasant, 28-Feb-2014, 8:11pm)

Thursday, February 27, 2014

Junjappa.....Me and the less Traveled Road!

Oh! What a spellbinding experience!......

After 24 hours of continuous work with 2-3 hours of short breaks, When I had returned home it was 11 o'clock in the night, yesterday ! (27-Feb-2014) Me and my wife had already decided to go to witness a unique tradition of worshiping Shiva on the occasion of Mahashivaratri!

I was so tired and sleepy. She said it with half mind, "It's already late. It is better to cancel". I said, "No way! Once it is decided, we must do it! Get ready within five minutes and we are driving down to the unknown place. Where there is a will, there is the way!".

We started from our home by 11:45pm. But were not sure about the exact road to the Village called Kaluvarahalli, near Tavarekere Hobli, Tumkur District. But my conscious was saying that we were going to experience something unique! My wife silently followed me! After one hour fifteen minutes drive, on the very less traveled, unknown road, we, somehow managed to reach the destination by 1 am! It was a real challenge till we reached the remote and most backward village, Kaluvarahali, situated about 80 kms away from Tumkur.

As soon as we reached the Junjappa Temple.... Oh! I am not able to capture the feeling I experienced! It was simply superb and mesmerizing! Junjappanna (The narrator) was singing the story of Junjappa (Shambhu) with intense involvement without the knowledge of this physical word! That made to forget all my tiredness! I was recharged by the enchanting music coming out from the bottom of the heart of the singer!



'Junjappa's story recital through folk songs' is one of the unique folk traditions practiced by the tribes in this region. It truly reflects the ideology, sacrifice, talent, patience and clean heartedness of the unique tribe called Kadu Golla.




The entire recital, which begins in the night and goes on till next morning is a real mystic experience! Junjappanna (the narrator) and the Ganekaara with his Gane (one who supports him with a flute like instrument) both forget this world and make the audience also forget everything! It was a unique experience. I will shortly upload a short video of the same soon! Till then....here are some photographs of my adventurous, yet fruitful, contented experience on the night of Mahashivaratri Jagaran!!




Wednesday, February 12, 2014

ಬಯಲು ಕಡೆ ಹೊಂಟಿದ್ದೆ! ಮೀನಾ ಹಿಡಿಯಲ್ಲೆ!


ನಮ್ಮದು ಹೇಳೋದು ನಮ್ಗೆ 
ಸರಿ ಅರ್ಥ ಅಪ್ಪಕಾರಕ್ಕೆ
ರಾಶಿ ಟೈಂ ಬೇಕಾಗ್ತು! 
ಬ್ಯಾರೆದು ಹಾಂಗಲ್ಲ! 
ಸ್ವಲ್ಪ ಅಂದ್ರೆ
ಖರ್ಚಿಗೆ ಸಾಕಪ್ಪಷ್ಟು ಅರ್ಥ 
ಆದ್ರೆ ಸಾಕಾಗ್ತು! 


ಅರ್ಥ ಅಪ್ಪದು ಅಷ್ಟು 
ಸುಲಭ ಅಲ್ದೋ ತಮಾ! 
ಒಳಗೆ ಇಳಿಯವ್ವು.... 
ಇಳ್ಕೋತಾ ಇಳ್ಕೋತಾ ಹೋದಾಂಗೆ 
ಅಂತ ಪಾರ್ ಹರೀತಿಲ್ಲೆ!
ಅದು ಅಪ್ಪಕಾರಕ್ಕೆ ಕೂದ್ಲೆಲ್ಲ
ಹಣ್ಣಾಗಿರ್ತು!ತಲೆ 
ಎಲ್ಲಾ ಕರಡ!
ಕಾಂಬ ಕಣ್ಣು ಕುರುಡ!


ಆವಾಗ ಒಳಗೆ ಬೆಳಕು
ಹರೀತು!ದಾರಿ 
ಕಾಂಬಲ್ಲೆ ಹಂಕ್ತು! 
ನಡ್ಯಲ್ಲೆ ತಾಕತ್ತು 
ಸಾಲ್ತಿಲ್ಲೆ! ಮೂರು ಕಾಲು ಬೇಕಾಗ್ತು!


ಅದ್ಕೆ ಹೇಳದು ಪ್ರಾಯ
ಇಪ್ಪ ಕಾರಕ್ಕೆ ವಿಸ್ತಾರ 
ಬಯಲಾಗವು! ಪ್ರಾಯ 
ಸೋತ್ ಮ್ಯಾಲೆ 
ಆಳಕ್ಕಿಪ್ಪ ಕೊಡ್ಲಾಗವು!
ಅದೆಲ್ಲ ಅಪ್ಪಕಾರಕ್ಕೆ ನಾವು 
ಮೊದ್ಲು ಸಡ್ಲಾಗವು!


ಲೀನ ಅಪ್ಪಕಾರಕ್ಕೆ 
ನಾ ಮೊದ್ಲು ನೀ ಆಗವ್ವು!
ನೀ..... ನೋ ಆಗವ್ವು!
ನೋ.....ನೌ ಆಗಿ ನಃ 
ಆದಾಗ ಲೀ ನಲ್ಲಿನ ನೀಲಿ 
ಬಿಳಿಯಾಗಿ ಬಯಲಾಗಿರ್ತು!


ನೀ ಅಪ್ಪಕಿರೆ ಮೂರ್ಕಾಲು 
ಎರ್ಡ್ ಕೈ ತಲ್ಲೀನಾಗವು ಆವಾಗ ಕೈಯೂ ಇಲ್ಲೆ....
ಕಾಲೂ ಇಲ್ಲೆ.....ಕೋಲೂ ಇಲ್ಲೆ....
ಕಾಲಾನೂ ಇಲ್ಲೆ! 
ಎಲ್ಲಾ ಬಟಾ ಬಯಲು! 


ಈಗ ಬರ್ತೆ! ಬಯಲು ಕಡೆ
ಹೊಂಟಿದ್ದೆ!ಮೀನಾ ಹಿಡಿಯಲ್ಲೆ!

-ವಸಂತ
6 ಫೆಬ್ರುವರಿ 2014

Wednesday, February 5, 2014

ಕನಸಿನಲ್ಲೂ ಕಾಡುವ ಬಾಲುಸರ್ ಮಾತುಗಳು!

ನೆವಾ ಹೇಳ್ಕೋತಾ ಬರ್ಬೇಡಾ ಮತ್ತೆ. ಹೂಂ....ಸರಿ ಕಣಯ್ಯಾ.... ಈಗ್ ಹೋಗಿ ಕ್ಲಾಸು ಅಟೆಂಡ್ ಮಾಡು...” ಕನಸಿನಲ್ಲೂ ಕಾಡುವ ಬಾಲುಸರ್ ಮಾತುಗಳು!

“ಏಯ್ ಭಟ್ಟಾ... ಸರಿ ಕ್ಲಾಸಿಗ್ ಬಾರಯ್ಯಾ... ಕಲಿಯೋ ಕಾಲಕ್ಕೆ ಸರ್ಯಾಗಿ ಕಲ್ತಕೋಬೇಕು. ಆಮೇಲೆ ಬುದ್ಧಿ ಬಂದ್ರೆ ಏನ್ಬಂತು. ಪಿಟಿಐ ಕಾಪಿ ಟ್ರಾನ್ಸ್ಲೇಶನ್ ಮಾಡ್ತಾ ಇದೀಯಾ? ನಿಮ್ಗೆ ಇವತ್ ಗೊತ್ತಾಗೋದಿಲ್ಲ. ನಾನೂಂದ್ರೆ ಬರೆ ಬಯ್ಕೋತಾ ಇರೋಂವಾ ಅಂತಾ ತಿಳ್ಕೋತೀರಯ್ಯಾ. ವಿದ್ಯಾಸಮಾಚಾರ ಏನಾಯ್ತು? ಮುಂದಿನ್ ವಾರಾ ಪ್ರಿಂಟಾಗಿ ಬರ್ಲೇ ಬೇಕು ನೋಡು. ನೆವಾ ಹೇಳ್ಬೇಡಾ ಮತ್ತೆ. ಹೂಂ... ಸರಿ ಕಣಯ್ಯಾ... ಈಗ್ ಹೋಗಿ ಕ್ಲಾಸು ಅಟೆಂಡ್ ಮಾಡು...” ಇದು ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ  ಓದುವಾಗ ಎಂ.ಎ. ಮೊದಲ ವರ್ಷದ ಉತ್ತರಾರ್ಧದಲ್ಲಿ ಬಾಲು ಸರ್ ನನಗೆ ಹೇಳಿದ್ದ ಮಾತು! ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ!

ತುಂಬ ನೇರ ಸ್ವಭಾವದ, ನೋಡಲು ಕೊಂಚ ಒರಟು ಎನ್ನಿಸಿದರೂ ಅಪ್ಪಟ ಸ್ವಚ್ಛ ಹೃದಯದ ಬಾಲುಸರ್ ಅವರ ವಿದ್ಯಾರ್ಥಿಗಳ ಮೇಲಿನ ಕಾಳಜಿ ಯಾವತ್ತೂ ಕಡಿಮೆಯಾಗಿಲ್ಲ. ಬಹುಶಃ ಕರ್ನಾಟಕ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಓದಿದ ಎಲ್ಲರ ಅನುಭವವೂ ಇದೇ ಆಗಿರುತ್ತದೆ ಎಂಬುದು ನನ್ನ ಬಲವಾದ ನಂಬಿಕೆ.

ನಾನು ಎಂ.ಎ.ಮಾಡುವ ಕಾಲಕ್ಕೆ ನಂದು ಇನ್ನೂ ಎಳಸು ಬುದ್ಧಿ. ಹುಡುಗಾಟಿಕೆಯ ಕಾಲ! ಬಾಲು ಮಾಸ್ತರ್ ಬಂದ್ರು ಅಂದ್ರೆ, ‘ಬಯ್ಯೋ ಮಿಶನ್ ಬಂದಾಂಗೆ’ ಅಂತಾ ತಮಾಷೆ ಮಾಡ್ಕೋತಿದ್ವಿ. ಬಯ್ಕೋತಾ ಬಯ್ಕೋತಾನೇ ಅವರು ಕೊಟ್ಟಿದ್ದ ಅಸೈನ್ಮೆಂಟುಗಳನ್ನ ಮಾಡ್ತಿದ್ವಿ. ಆದರೆ ಈಗ ಅವರ ಕಾಳಜಿ ಅರ್ಥ ಆಗ್ತಿದೆ. ಇವತ್ತು ಬದುಕಿನ ದಾರಿಯಲ್ಲಿ ಅಂದು ಬಾಲು ಸರ್ ಹೇಳಿದ ಅದೆಷ್ಟೋ ಸಂಗತಿಗಳು ನೈಜವಾಗಿ ಎದುರಾದಾಗ, ಸಮರ್ಥವಾಗಿ ಎದುರಿಸುವುದು ಹೇಗೆಂಬ ಧೈರ್ಯ ಮೂಡಲು ಪ್ರಾಯಶಃ ಅವರ ಕಾಳಜಿ ಮತ್ತು ಅಂತಃಕರಣ ಪೂರ್ವಕವಾದ ಬುದ್ಧಿ ಮಾತುಗಳು ದಾರಿಯ ಬುತ್ತಿಯಾಗಿ ನೆರವಿಗೆ ಬರುತ್ತಿರುವ ಈ ಸಂದರ್ಭದಲ್ಲಿ ಬಾಲು ಸರ್ ಬಗ್ಗೆ ಗೌರವ ಇನ್ನೂ ಹೆಚ್ಚಾಗುತ್ತದೆ.

ಪತ್ರಿಕೋದ್ಯಮ ಎಂ.ಎ ಮೊದಲ ವರ್ಷದ ನಂತರ ಇಂಟರ್ನ್ ಶಿಪ್ ಗಾಗಿ ಮುಂಬೈ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೋಗಬೇಕೆಂಬ ಆಲೋಚನೆಗೆ ಒತ್ತು ನೀಡಿದವನು ಗೆಳೆಯ, ಸಹಪಾಠಿ, ಮನೋಜ್ ಕುಮಾರ್. ಅಲ್ಲಿನ ವಸತಿ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡಿದವನು ನನ್ನ ಸಹೋದರ ವೆಂಕಟ್ ರಮಣ್. ಈ ಪೂರ್ವಸಿದ್ಧತೆಗಳೊಂದಿಗೆ ಬಾಲು ಸರ್ ಅವರನ್ನು ಪರ್ಮಿಷನ್ ಕೇಳಲು ಹೋದಾಗ, “ಪರ್ವಾಗಿಲ್ವಯ್ಯಾ, ನಿನ್ ಧೈರ್ಯಕ್ಕೆ ಮೆಚ್ಕೋಬೇಕು. ಏನೂ ಗೊತ್ತೇ ಇಲ್ಲದ ಮುಂಬೈಗೆ ಹೋಗ್ತೀಯಾ ಅಂದ್ರೆ ಅದು ಸಣ್ಣ ಮಾತಲ್ಲ. ಹೊರಗಡೆ ಹೋಗ್ಬೇಕು ಕಣಯ್ಯಾ. ಆವಾಗ್ಲೇ ಬದುಕು ಅರ್ಥ ಆಗೋದು. ಹೋಗ್ ಬನ್ನಿ. ನಮ್ಮ ವಿಶ್ವವಿದ್ಯಾನಿಲಯದಿಂದ ಮೊದಲನೇ ಬಾರಿಗೆ ಮುಂಬೈಗೆ ಹೋಗ್ತಾ ಇದ್ದೀರಿ. ಯಾಕೆ ಹೋಗ್ತಾ ಇದ್ದೀರಿ ಅಂತಾ ನೆನಪಿಟ್ಕೊಳ್ಳಿ. ಚೆನ್ನಾಗಿ ಕಲ್ತುಕೊಂಡ್ ಬನ್ನಿ. ಹುಡುಗಾಟಾ ಮಾಡ್ಲಿಕ್ಕೆ ಹೋಗ್ಬೇಡಿ. ಒಳ್ಳೇದ್ ಆಗ್ಲಿ ಕಣಯ್ಯಾ”, ಅಂತ ಹೇಳಿ ಪರ್ಮಿಷನ್ ಮತ್ತು ರಿಕ್ವೆಸ್ಟ್ ಲೆಟರ್ ಕೊಟ್ಟಿದ್ದರು. ಮುಂದೆ ನಾನು, ಮನೋಜ ಇಬ್ರೂ ಮುಂಬೈ ಎಂಬ ಮಾಯಾ ನಗರಿಯಲ್ಲಿ  ಠಾಣೆಯಲ್ಲಿರುವ ನನ್ನ ಸಹೋದರನ ಮನೆಯಿಂದ ಚರ್ಚ್ ಗೇಟ್ ನಲ್ಲಿರುವ ಎಕ್ಸ್ ಪ್ರೆಸ್ ಕಛೇರಿವರೆಗೆ ದಿನಾಲೂ ನಾಲ್ಕರಿಂದ ಐದು ತಾಸು ಲೋಕಲ್ ಟ್ರೇನಿನಲ್ಲಿ ಅಡ್ಡಾಡ್ತಾನೇ, ಮೊದಲು ತೀರಾ ಅಪರಿಚಿತವಾಗಿದ್ದ ಮುಂಬೈ ಎಂಬ ಮಾಯಾ ನಗರಿಯ ಮಾಯಾಜಾಲದಲ್ಲಿ ಬದುಕುವುದು ಹೇಗೆ ಎಂಬ ಪ್ರಾಥಮಿಕ ಪಾಠವನ್ನು ಕಲಿತೆವು! ಇಂಟರ್ನ್ ಶಿಪ್ ಮುಗಿಯುವದರೊಳಗಾಗಿ ಅಂದಿನ ಸಂಪಾದಕ ವಿವೇಕ್ ರಾವ್ ಮತ್ತು ನಮಗೆ ನಿಜವಾಗಿಯೂ ಎಡಿಟಿಂಗ್ ಕೆಲಸ ಕಲಿಸಿದ ಮ್ಯಾಸ್ಕಿ (ಮ್ಯಾಸ್ಕರ್ಹಾನಸ್), ಕ್ರೈಂ ರಿಪೋರ್ಟಿಂಗಿನ ಓನಾಮ ಹಾಕಿಕೊಟ್ಟ ಜೇ ಡೇ, ತುಂಬ ಆತ್ಮೀಯರಾಗಿಬಿಟ್ಟಿದ್ದರು. ವಿವೇಕ್ ರಾವ್ ಅಂತೂ ಡಿಗ್ರಿ ಮುಗಿಸಿದ ಕೂಡಲೇ ಬಂದು ಮುಂಬೈ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿಗಾರರಾಗಲು ಸೂಚಿಸಿದ್ದರು. ಇದಕ್ಕೆಲ್ಲ ಬಾಲು ಸರ್ ಅವರ ಪ್ರೋತ್ಸಾಹ ಮತ್ತು ವಿದ್ಯಾರ್ಥಿಗಳೆಡೆಗೆ ಅವರಿಗಿರುವ ಕಳಕಳಿ ಕಾರಣವೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ವಿಶ್ವವಿದ್ಯಾನಿಲಯದ ಬೋಧನಾ ಕೊಠಡಿಯೊಳಗಿನಕಿಂತಲೂ ವಿದ್ಯಾರ್ಥಿಗಳು ಬಯಲೆಂಬ ವಿಶ್ವವಿದ್ಯಾಲಯದಲ್ಲಿ ಜೀವನ ಪಾಠ ಕಲಿತುಕೊಳ್ಳಬೇಕು ಎಂಬುದು ಅವರ ನಿಲುವು.

ಮುಂದೆ 1999ರಲ್ಲಿ ನನ್ನ ಎಂ.ಎ. ವಿದ್ಯಾಭ್ಯಾಸ ಮುಗಿಯುವವರೆಗೂ ನಾನು ನೊಟೋರಿಯಸ್ ವಿದ್ಯಾರ್ಥಿಗಳ ಪೈಕಿ ಒಬ್ಬವನೆಂದು ಗುರುತಿಸಲ್ಪಟ್ಟು, ಸೆಕೆಂಡ್ ಕ್ಲಾಸ್ನಲ್ಲಿ ಪಾಸಾದ ಬರ್ಬಾದ್ ಗಿರಾಕಿ ಎಂದು ಅದಾಗಲೇ ಎಸ್ಟಾಬ್ಲಿಷ್ ಆಗಿಬಿಟ್ಟಿತ್ತು! ನಾನು ಎಂ.ಎ.ಫೈನಲ್ ನಲ್ಲಿ ಉತ್ತರ ಕನ್ನಡ ಪತ್ರಿಕೋದ್ಯಮ ಪಿತಾಮಹ, ಕನ್ನಡದ ಚುಟುಕ ಬ್ರಹ್ಮ ದಿನಕರ ದೇಸಾಯಿ ಅವರ ‘ಜನಸೇವಕ’ ಪತ್ರಿಕೆಯ ಮೇಲೆ ಮಾಡಿದ ಡೆಸರ್ಟೇಶನ್ ಓದಿದ ಅಂದಿನ ಪತ್ರಿಕಾ ಅಕಾಡೆಮಿಯ ಅಧ್ಯಕ್ಷ ಶ್ರೀ ಗರುಡನಗಿರಿ ನಾಗರಾಜರು, “ತುಂಬ ಚೆನ್ನಾಗಿದೆ. ಇದನ್ನು ‘ಪತ್ರಿಕಾ ಲೋಕದ ಧೀಮಂತರು’ ಮಾಲಿಕೆಯಲ್ಲಿ ಪ್ರಕಟಿಸಬಹುದಲ್ಲ”, ಎಂದು ಹೇಳಿದ್ದಷ್ಟೇ ಅಲ್ಲ 2001ನೇ ಇಸ್ವಿಯಲ್ಲಿ ಪ್ರಕಟಿಸಿಯೂ ಬಿಟ್ಟರು! ಅದರ ಒಂದು ಪ್ರತಿಯನ್ನು ಕೊಡಲು ಪತ್ರಿಕೋದ್ಯಮ ವಿಭಾಗಕ್ಕೆ ಹೋದಾಗ  ಅತ್ಯಂತ ಖುಷಿಪಟ್ಟ ಬಾಲು ಸರ್ ಮತ್ತು ಅದೇ ಮೊದಲ ಬಾರಿಗೆ ಅವರ ಮುಖದಲ್ಲಿ ಹೆಮ್ಮೆಯ ನಗುವನ್ನು ನೋಡಿದ ನನಗೆ ಹೃದಯ ತುಂಬಿಬಂದಿತ್ತು.

ಇವತ್ತಿಗೂ ಆಗಾಗ ಸಿಕ್ಕಾಗ, ದೂರವಾಣಿಯಲ್ಲಿ ಅಪರೂಪಕ್ಕೊಮ್ಮೆ ಮಾತನಾಡುವಾಗ, “ ಹಾಂ, ಹೇಳಯ್ಯಾ, ಏನ್ ಹೊಸಾ ಸಾಹಸಾ ಮಾಡಿದೀಯಾ?” ಅಂತಾನೇ ಮಾತಿಗೆ ಶುರುವಿಟ್ಟುಕೊಳ್ಳುವ ಬಾಲು ಸರ್ ಆಪ್ತರೆನಿಸಿಬಿಡುತ್ತಾರೆ. ಪತ್ರಿಕೋದ್ಯಮ ವಿಷಯದಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಪ್ರಾರಂಭ ಮಾಡಿದ ನಂತರ ನಾನು ಸ್ಥಳೀಯ ಪತ್ರಿಕೆಯೊಂದರಲ್ಲಿ ಉಪಸಂಪಾದಕ, ವರದಿಗಾರನಾಗಿ, ನಂತರ ಬೆಂಗಳೂರಿನಲ್ಲಿ ‘ದ ಮುಂಬೈ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯ ವಾಣಿಜ್ಯ ವಿಭಾಗದ ಪತ್ರಿಕೆಗಳ ಹಿರಿಯ ವರದಿಗಾರನಾಗಿ, ಕಾರ್ಪೋರೇಟ್ ಕಂಪನಿಗಳಲ್ಲಿ ಉತ್ತರ ಕರ್ನಾಟಕದ ಎಚ್.ಆರ್. ಮತ್ತು ಟ್ರೇನಿಂಗ್ ವಿಭಾಗಗಳ ಮುಖ್ಯಸ್ಥನಾಗಿ, ಸಧ್ಯ ಪಬ್ಲಿಕ್ ರಿಲೇಶನ್ ಮತ್ತು ಕಾರ್ಪೋರೇಟ್ ಕಮ್ಯೂನಿಕೇಶನ್ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕನಾಗಿ, ಜೊತೆಗೆ ಸ್ವತಂತ್ರವಾಗಿ ನನ್ನ ಕ್ಷೇತ್ರದಲ್ಲಿ ಅನುಭವಿ ಅನುವಾದಕನೆಂದು ಗುರುತಿಸಲ್ಪಟ್ಟು ನನ್ನ ಜೀವನೋಪಾಯದ ದಾರಿಯನ್ನು ಕಂಡುಕೊಂಡಿದ್ದೇನೆ. ಇದಕ್ಕೆಲ್ಲ ಪೂರಕವಾಗಿ ನನ್ನ ಮೇಲೆ ಕಾಳಜಿ ತೋರಿದ, ಪ್ರೀತಿಯಿಟ್ಟಿರುವ ಬಾಲು ಸರ್ ಹಾಗೂ ಅವರಂತಹ ಅನೇಕ ವಿದ್ಯಾಗುರುಗಳ ಶುಭೇಚ್ಛೆ ಬೆನ್ನೆಲುಬಾಗಿದೆ ಎಂಬುದು ನನಗೆ ಖಂಡಿತವಾಗಿಯೂ ಅರಿವಿಗೆ ಬಂದಿದೆ.

ಕರ್ನಾಟಕ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವನ್ನು ಸಮರ್ಥವಾಗಿ ಕಟ್ಟಿ, ಬೆಳೆಸಿ, ಮುನ್ನಡೆಸಿದ ಬಾಲು ಸರ್ ಇವತ್ತು ದೇಶದಾದ್ಯಂತ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಾಲು ಸರ್ ಅವರ ಪ್ರೀತಿ, ಕಾಳಜಿ ಕಳಕಳಿಯನ್ನು ಅನುಭವಿಸಿದ್ದಾರೆ. ಅವರು ಇಂದು ವೃತ್ತಿಯಿಂದ ನಿವೃತ್ತಿಯನ್ನು ಹೊಂದುತ್ತಿದ್ದರೂ ಅವರು ನಮ್ಮಲ್ಲಿ ನೆಟ್ಟು ಬೆಳೆಸಿದ ಜೀವನ ಮೌಲ್ಯಗಳ ಬೀಜಗಳು ಎಂತಹ ಪರಿಸ್ಥಿತಿಯಲ್ಲೂ ಹುಸಿಹೋಗಲಾರವು. ನಮ್ಮ ಬದುಕಿನಲ್ಲಿ ಬೆಳಕಿನ ದೀಪವಾಗಿ ನಾವು ಸರಿದಾರಿಯಲ್ಲಿ ಮುಂದೆ ಮುಂದೆ ಸಾಗಲು ಬಾಲು ಸರ್ ಅವರ ‘ಗಂಭೀರ ಗಂಟು ಮುಖ’ ನಮ್ಮನ್ನು ಸದಾ ಕಾಡುತ್ತಿರುತ್ತದೆ, ಕಾಪಾಡುತ್ತಿರುತ್ತದೆ ಎಂಬ ಅಂಬೋಣ ನನ್ನದು.

-ವಸಂತ

********

Monday, February 3, 2014

ಶೂನ್ಯಸೃಷ್ಟಿ

ಶೂನ್ಯಸೃಷ್ಟಿ

ಕಣ್ಣಂಚಿನ ಕುಡಿನೋಟ
ಕಿಚ್ಚಿಬ್ಬಿಸಿ, ಕಿಬ್ಬೊಟ್ಟೆಯಾಳದಲಿ
ನಾಭಿಮೂಲದಿಂದ ಹೊರಟ
ಗಾಂಧಾರಿ ಕಣ್ಣಿಗಂಟಿದ
ಬಿಳುಪು ಪಟ್ಟಿ
ಹಗಲುಗುರುಡು!

ಹರಿ...ಹರಿಯಬೇಕು ಒಳಗಣ್ಣಪೊರೆ
ಜಿಹ್ವಾಮೂಲದ ಸರ
ಸೋತಿ ಬಡಪೆಟ್ಟಿಗೆ ಸೋಲು
ವವಳಲ್ಲ
ಹಾಯಿಸಬೇಕು ಕುಂಡಲಿನಿಯ
ಮೂಲಕ್ಕೆ ಓಂಕಾರ
ಪ್ರಾಣನಾದ, ಪ್ರಣವನಾದ.

ಒಳಗಣೊಳಗೆ ಹೊಸಬೆಳಕು
ಜೀವದೊರತೆಯ ಜತೆಗೆ
ಸಂತಭಾವದ ಜಿನುಗು
ಭವದಹಂಕಾರದ ಪೊರೆ
ಕಳಚುವಕಾಲ-ಲಯದ ಲೆಕ್ಕ

ಲಯದಲ್ಲಿ ಲಯವಾಗಿ, ಸ್ವರನಾದಿ
ನಾದರೂಪಕವಾಗಿ, ಬಯಲ ಸಂಗೀತಕ್ಕೆ
ಕಿವಿಯಾಗಿ ಹೃದಯ ಶೃತಿ
ಗೊಳಿಸಿ, ಮೀಟಿದರೆ ತಂಬೂರಿ ತಂತಿ
ಶಬ್ದ ವಜ್ಜೆ, ಅರ್ಥ ಲಜ್ಜೆ
ಶೂನ್ಯ.....ಶೂನ್ಯಸೃಷ್ಟಿ!

-ವಸಂತ
2 ಫೆಬ್ರುವರಿ 2014,
ಉತ್ಸವ್ ರಾಕ್ ಗಾರ್ಡನ್ಸ್, ಶಿಗ್ಗಾಂವಿ
******

Monday, December 30, 2013

2013 .......ಡಿಸೆಂಬರ್ 31.... ಬೆಳಗಿನ 4 ಗಂಟೆಯ ಸಮಯ.....ನಿದ್ದೆ ಬಾರದೆ ಹಾಗೆ ಸುಮ್ಮನೆ ಹಿಂತಿರುಗಿ ನೋಡಿದಾಗ

2013 .......ನಿದ್ದೆ ಬಾರದೆ........ ಹಾಗೆ ಸುಮ್ಮನೆ ಹಿಂತಿರುಗಿದಾಗ.......

ಡಿಸೆಂಬರ್ 31

ಡಿಸೆಂಬರ್ ತಿಂಗಳಿಡೀ ಹೊಸ ಹೊಸ ಕನಸುಗಳು! ಹೊಸ ಪ್ರಯತ್ನಗಳು....ಪ್ರಯೋಗಗಳು.....

ಡಿಸೆಂಬರ್ 3
ಥಟ್ಟನೆ ತಟ್ಟಿದ ಬ್ಯುಕೋಸ್ಕಿ ಕವಿತೆಗಳು... ಅನುವಾದ

ನವಂಬರ್ 27
ಕವಿತೆ ಅನುವಾದ
ಬಿಳಿ ಕನಸು   
  
ನವಂಬರ್ 14
ನಿನ್ನೆ ಮದ್ಯಾಹ್ನ ಹುಬ್ಬಳ್ಳಿಯಲ್ಲಿದ್ದೆ. ಜನಶತಾಬ್ದಿಯಿಂದ ಹೊರಡಬೇಕಿತ್ತು.ಊರಿನಿಂದ ಬಸ್ ನಲ್ಲಿ ಬಂದು ಹುಬ್ಬಳ್ಳಿ ತಲುಪಿದಾಗ ಅದಾಗಲೇ ಮಧ್ಯಾಹ್ನ 1.45 ಗಂಟೆಯಾಗಿತ್ತು. ಊಟಕ್ಕೆ ಸಮಯವಿರಲಿಲ್ಲ. ಅಟೊ ಒಂದನ್ನು ಹತ್ತಿ ಅರ್ಜಂಟಾಗಿ ರೇಲ್ವೆ ನಿಲ್ದಾಣಕ್ಕೆ ಬಿಡು ಮಾರಾಯ ಅಂದೆ. ಅಷ್ಟರಲ್ಲೇ ಚೌಕಾಸಿಯೂ ನಡೆದಿತ್ತು ಛಾರ್ಜಿಗಾಗಿ! 40 ರೂಪಾಯಿ ಕೊಡಿ ಅಂದ. ಜಾಸ್ತಿ ಆಯ್ತಲ್ಲ ಮಾರಾಯಾ ಅಂದೆ. ಇಲ್ಲಾ ಸಾರ್ ಎಲ್ಲಾ ತುಟ್ಟಿಯಾಗಿದೆ. ನಿಮಗೇ ಗೊತ್ತಲ್ಲಾ ಅಂದ. ಸರಿನಪಾ ಹೊರದು ಅಂತಂದೆ. ಚೆನ್ನಮ್ಮನ ಸರ್ಕಲ್ ಬರುತ್ತಿದ್ದಂತೆ ಹೊಟ್ಟೆ ಚುರುಗುಡುತ್ತಿತ್ತು. ಸ್ವಲ್ಪ ನಿಲ್ಸು ಮಾರಾಯಾ.. ಸ್ಟೇಶನ್ ಮುಟ್ಟೋದ್ರೊಳಗೆ ಏನಾದ್ರೂ ಸ್ವಲ್ಪ ತಿಂತಾನೆ ಹೋಗೊಣ ಅಂತಂದೆ. ನಿಲ್ಲಿಸಿದ. ಓಡಿಹೋಗಿ ಒಂದ್ ಚಿಪ್ಸ್ ಪಾಕೀಟು ಮತ್ತು ತಂಪು ಪಾನೀಯ ತಗೊಂಡ್ ಬಂದು ಕುಳಿತೆ. ಐದೇ ನಿಮಿಷದಲ್ಲಿ ಹಬ್ಬಳ್ಳಿ-ಧಾರವಾಡದ ಹವಾ, ತುಟ್ಟಿಯಾಗುತ್ತಿರುವ ಕಾಲ, ಸುಧಾರಿಸಿದ ರೇಲ್ವೆ ನಿಲ್ದಾಣ, ಜಗತ್ತು... ಜನ... ಜನಾರ್ಧನ... ಎಲ್ಲ ನಮ್ಮ ಮಾತಿನಲ್ಲಿ ಬಂದು ಹೋದರು! ಸ್ಟೇಶನ್ ತಲುಪಿದಾಗ ರೈಲು ಇನ್ನೂ ಬಂದಿಲ್ಲ ಎಂದು ತನ್ನ ಕಾಮನ್ ಸೆನ್ಸ್ ಉಪಯೋಗಿಸಿ ಆತನೇ ಹೇಳಿದ. ಹಾಗಾದ್ರೆ ಒಂದೈದು ನಿಮಿಷ ಇಲ್ಲೆ ಕೂತ್ಕೊಂಡು ತಿಂಡಿ ತಿಂದು ಮುಗಿಸಿ ಎಂದೂ ಆತ್ಮೀಯವಾಗಿ ಹೇಳಿದ! ಕೆಲವೇ ನಿಮಿಷಗಳ ಒಡನಾಟದಲ್ಲಿ ಆ ಅಟೋಮಾಮ ಹತ್ತಿರದವನೆನಿಸಿಬಿಟ್ಟಿದ್ದ. ಇದು ಬಹುಷಃ ಹುಬ್ಬಳ್ಳಿ-ಧಾರವಾಡದ ಮಣ್ಣಿನ ಗುಣ. ಜನ ಡೌನ್ ಟು ಅರ್ಥ್ ಇರ್ತಾರಿಲ್ಲಿ. ಕೆಲ ನಿಮಿಷಗಳಲ್ಲಿ ಆತ ಹೇಳಿದಂತೆ ರೈಲು ಬಂತು. ಪುಟ್ಟ ಶಿಶುವನ್ನು ಹೊತ್ತ ತಾಯಿಯೊಬ್ಬಳು ಉರಿಬಿಸಿಲಿನಲ್ಲಿ ನಡೆದು ಬರುತ್ತಿದ್ದಳು. ಅಟೋ ಮಾಮಾನ ಹತ್ತಿರ ಚೌಕಾಸಿ ಮಾಡತೊಡಗಿದಳು. ಯಾಕೋ ಚೌಕಾಸಿ ಮಾಡತೀಯಾ. ಮಗು ಇದೆ. ಕರ್ಕೊಂಡ್ ಹೋಗೋ ಮಾರಾಯ ಅಂದಾಗ, ಆಯ್ತು ಸಾರ್, ನಿಮ್ಮಂಥೋರು ಬಾಳ ಅಪರೂಪಕ್ಕೆ ಸಿಗತಾರೆ. ಬರ್ತೀನಿ ಸಾರ್ ಅಂತಂದು ತನ್ನ ಡ್ಯೂಟಿಗೆ ತಾ ಹೋದ. ಹುಬ್ಬಳ್ಳಿ-ಧಾರವಾಡದ ಘಮವನ್ನು, ಆರದ ನೆನಪುಗಳ ಸುರುಳಿಯನ್ನು ಬಿಚ್ಚುತ್ತ ನಾನೂ ರೈಲಿನ ಚುಕುಬುಕು ಲಯದೊಳಗೆ ಲಯವಾಗತೊಡಗಿದೆ.

ನವಂಬರ್ 7
ಫೇಸ್ ಬುಕ್ ನ https://www.facebook.com/groups/620733744617797/ ನಲ್ಲಿ ಮ್ಯೂಸಿಕಲ್ ಸಾಗಾ ಬರವಣಿಗೆ ಆರಂಭ

ನವಂಬರ್ 4
A warm get together 

ಅಕ್ಟೋಬರ್ 22
ನಿನಾಸಂ ಈ ವರ್ಷದ ತಿರುಗಾಟ ನಾಟಕ 'ಗಾಂಧಿ ವರ್ಸಸ್ ಗಾಂಧಿ' ನಾಟಕ ನೋಡಿದೆ. ಬಹಳ ದಿನಗಳ ನಂತರ ಒಂದು ಕಾಡುವ ನಾಟಕ ನೋಡಿದ ಅನುಭವ. ಭೀಮಸೇನ ಜೋಶಿಯವರ ದರಬಾರಿ ಕಾನಡಾ ರಾಗದಂತೆ! ಮನಸ್ಸಿಗೆ ನೇರವಾಗಿ ನಾಟುವ ಸಂಭಾಷಣೆಗಳು. ನಾಟಕಕಾರ ಅಜಿತ್ ದಳವಾಯಿ ರಚಿಸಿದ ಈ ಕೃತಿಯನ್ನು ಶ್ರೀ ಡಿ.ಎಸ್.ಚೌಗಲೆ ಅವರು ಮನೋಜ್ಞವಾಗಿ ಕನ್ನಡೀಕರಿಸಿದ್ದಾರೆ. ಎಂ ಗಣೇಶ್ ಅವರ ನಿರ್ದೇಶನವೂ ತುಂಬ ಪವರ್ ಫುಲ್. ಈ ಸಾರಿಯ ತಿರುಗಾಟ ತಂಡದಲ್ಲಿರುವ ಉತ್ತಮ ನಟರ ಪರಿಣಾಮಕಾರಿ ಅಭಿವ್ಯಕ್ತಿ ಕೂಡ ವಿಶೇಷ ಮೆರಗನ್ನು ಪಡೆದು ನಾಟಕ ಕಳೆಕಟ್ಟುತ್ತದೆ. ನಿನ್ನೆ ರಾತ್ರಿಯಿಡೀ ನನ್ನೊಳಗಣ ಗಾಂಧಿ....ಹರಿಲಾಲ...ಕಸ್ತೂರ್ಬಾ.... ಸಂವಾದಕ್ಕೆಳೆಸಿದ್ದರಲ್ಲದೇ ಈಗಲೂ ಒಳಗೆ ತುಮುಲಿಸುತ್ತಿದ್ದಾರೆ! ಇನ್ನೂ ಹ್ಯಾಂಗ್ಓವರ್ ನಿಂದ ಹೊರಬರಲಾಗುತ್ತಿಲ್ಲ. ಉತ್ತಮ ನಾಟಕವೊಂದನ್ನು ತೋರಿಸಿದ ಗೆಳೆಯ ಉಗಮ ಶ್ರೀನಿವಾಸ್ ಮತ್ತವರ ಝೆನ್ ಟೀಮಿಗೆ ಶಹಬ್ಬಾಸ್! ನಿಮ್ಮೂರಿಗೆ ಈ ಸಲದ ನಿನಾಸಂ ತಿರುಗಾಟ ನಾಟಕಗಳು ಬಂದರೆ ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳದೇ ನೋಡಿ.

ಅಕ್ಟೋಬರ್ 18-20
ಮೈಸೂರು ZOO News! 
All are in sleeping mode!






ಅಕ್ಟೋಬರ್ 11
Recently I had an opportunity to participate in a religious ritual called 'Gondal'. It is a commonly practiced ritual in Maharastra where Parashurama's story is narrated. Some time the narrator explains Tulaja Bhavani's story also! Wonderful experience during the fire dance!

 ಸಪ್ಟೆಂಬರ್ 30
Still in the hangover!.... goonja rahee.....Sangeet jagat me..... mesmerizing singing of raag Nat Bhairav byPt.Ganapati Bhat hasanagi at Kundgol Sawai Gadharva festival this morning! (30-9-2013)



ಸಪ್ಟೆಂಬರ್ 24
I learnt to ride bicycle before I was 10 years. Learnt to ride two -wheeler in teens. Drive four -wheeler in twenties. Now in my middle age, for the first time I tried two balance between eight wheels and successful in the very first attempt. I started learning scatting along with my eight year old son. He is my coach!





ಸೆಪ್ಟೆಂಬರ್ 20
It was a memorable day. After a gap of few days I have conducted a workshop on translation for the students of Post Graduate English Literature, Department of Studies and Research in English, Tumkur University. I really forgot myself about 4 and half continuous hours! The response from the students was also immensely influenced me! They are really talented and reaffirmed my belief that today's youth are more creative and energetic. If they could get a proper training they can achieve wonders. I sincerely thank Dr. H K Shivalinga Swamy, the Chairman of the Department and his young scholarly team of professors, for providing this great opportunity to share my little knowledge with the young friends and to be one along with them.



ಅಗಸ್ಟ್ 15,
@ my native. Been to Sri Raj Rajeshwari High School, Manchikeri, where I did my middle schooling. Remembered Sri N Jayappa.... PE teacher....who used to train us for 2-3 kilometers long Prabhat Pheri and Pheri Songs! Sri.G.K.Hegde...our English teacher....who encouraged us to participate in extracurricular activities.....They were real dedicated teachers! 24X7 gurus! A big Salute to them!


ಅಗಸ್ಟ್ 2-12,
At ARishikesh on the banks of holy river Ganga! It is simply wonderful! No words to utter! Sublime!  It was raining today in Rishikesh! It was like listening to Sur Malhar......
The Vibrant Ganga Arati @ Haridwar. It is a daily event where lakhs of people witness the spellbinding event on the banks of river Ganga
Nature's Paintings through wonder eyes! (46 photos)
Some clicks on the way towards Tehri...The Tehri Dam is the highest dam in India and one of the tallest in the world...... The backwaters go more than 70kms.... Height     260.5 m (855 ft), Length        575 m (1,886 ft)..... And the water stored is almost 815 feet. Ganga has swallowed many mountains! Rishikesh and Haridwar are saved just because of this dam during the last month's calamity!












ಜುಲೈ 14
ಬೆಳಕು ಮೂಡಿತು....ಮಸುಕು ಸರಿಯಿತು... ಹಲವಾರು ವರ್ಷಗಳ ನಂತರ ಹಗುರಾಗಿ! ಮನಸ ಹಕ್ಕಿ ರಕ್ಕೆಬಿಚ್ಚಿ ಮತ್ತೆ ಹಾರಿತು....

ಮೇ 30,

ಕುವೆಂಪು ಸಾರ್ವಕಾಲಿಕ ಸತ್ಯವನ್ನು ಸಾಹಿತ್ಯದಲ್ಲಿ ತೋರಿದ ದಾರ್ಶನಿಕ. ಅವರ ಮಲೆಗಳಲ್ಲಿ ಮದುಮಗಳು ನಾಟಕರೂಪವನ್ನು ಬೆಳಗಿನ 6 ಗಂಟೆಯವರೆಗೂ ನೋಡಿ ಮನದುಂಬಿಕೊಂಡು ಬಂದಿದ್ದೇನೆ. ರಾತ್ರಿ 8.30ಗೆ ಶುರುವಾದ ನಾಟಕ ಪ್ರಾರಂಭದಿಂದ ಅಂತ್ಯದವರೆಗೂ ಒಂದೇ ಒಂದು ನಿದ್ದೆಯ ಜೊಂಪೂ ಬಾರದಂತೆ ಹಿಡಿದಿಟ್ಟ ಪರಿ ಅನನ್ಯವಾದದ್ದು. ಪ್ರಾರಂಭದಿಂದ ಅಂತ್ಯದವರೆಗೂ ಅದೇ ಆಸಕ್ತಿ ಕುತೂಹಲಗಳನ್ನು ಉಳಿಸಿಕೊಂಡು ಬರುವಲ್ಲಿ ರಂಗರೂಪ ತುಂಬ ಯಶಸ್ವಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಬಸವಲಿಂಗಯ್ಯ, ಕೆ.ವಿ.ನಾರಾಯಣಸ್ವಾಮಿ, ಹಂಸಲೇಖ ಹಾಗೂ ಅವರ ತಂಡದ ಎಲ್ಲಾ ಸದಸ್ಯರಿಗೂ ಹೃತ್ಪೂರ್ವಕ ವಂದನೆಗಳು. ಮನಮುಟ್ಟುವ ಸಂಭಾಷಣೆಗಳು, ಅಷ್ಟೇ ಸಮರ್ಥವಾಗಿ ಅದನ್ನು ನಿರೂಪಿಸಿದ ನಟರು, ಒಳ್ಳೆಯ ಸಂಗೀತ ಹಾಗೂ ನಾಲ್ಕು ವಿವಿಧ ರಂಗಸ್ಥಳಗಳಲ್ಲಿ ಮೂಡಿಬಂದ ಮದುಮಗಳು ಮುದನೀಡಿದ್ದಾಳೆ. ಒಂದೇ ಒಂದು ಸಂಭಾಷಣೆಯೂ ಇಲ್ಲದೇ ಪ್ರಾರಂಭದಿಂದ ಅಂತ್ಯದವರೆಗೂ ತುಂಬ ಚಟುವಟಿಕೆಯಿಂದ ಗಮನಸೆಳೆದ ಗುತ್ತಿನಾಯಿ(ಅದರ ಪಾತ್ರ ಮಾಡಿದ ನಟನ ಅದ್ಭುತ ಸಾಮರ್ಥ್ಯಕ್ಕೆ ಹ್ಯಾಟ್ಸ್ ಆಫ್!) ಗುತ್ತಿ, ಐತ ಮತ್ತು ಪೀಂಚಲು, ಸುಬ್ಬಣ್ಣ ಹೆಗಡೆ, ದೇವಯ್ಯ ಬೇರೊಂದು ರೀತಿಯ ಲೋಕವನ್ನೇ ತೆರೆದಿಟ್ಟು ಕಾದಂಬರಿಯನ್ನು ಓದುವಾಗಿನದಕ್ಕಿಂತ ಭಿನ್ನವಾದ ಅನುಭವದ ಲೋಕಕ್ಕೆ ಕರೆದೊಯ್ಯುತ್ತಾರೆ. ಒಳ್ಳೆಯ ರಸಾಸ್ವಾದ ನೀಡಿದ ಎಲ್ಲ ಕಲಾವಿದರಿಗೂ ವಂದನೆಗಳು.

ಎಪ್ರಿಲ್ 25,

Monkey and Me.... Hand in hand!
This afternoon a monkey came and stood before the window of my house and started expressing hunger and thrust! About half an hour he was with me and ate stomach full of papaya and went away with a smiley face!





ಜನವರಿ 26,

ಅಜ್ಜ, ಮೊಮ್ಮಗ,..... ಸಂತಸದ ನಡಿಗೆ ಜತೆಗೆ ವಸಂತ!


ಜನವರಿ 24,

 ಫೇಸ್ ಬುಕ್ ನಲ್ಲಿ ಕಂಡ ಮುಖಗಳು.....ಕೃಪೆ: ಶಿವಾನಂದ ಹೆಗಡೆ, ಕೆರೆಮನೆ

ಆದಿನ ನಾವು ಕೆರೆಮನೆ ಮಹಾಬಲ ಹೆಗಡೆಯವರ ಮನೆಗೆ ಹೋಗಿದ್ದಾಗ ನಮ್ಮನ್ನು ಸ್ವಾಗತಿಸಿದ್ದು ತುಂಡು ಪಂಚೆಯುಟ್ಟು ಸಗಣಿಗೊಬ್ಬರವನ್ನು ಅಡಿಕೆ ಗಿಡಗಳಿಗೆ ಸೋಕುತ್ತಿದ್ದ ಮಹಾಬಲರು! ತುಂಬಾ ತಮಾಶೆಯ ಸ್ವಭಾವದವರಾಗಿದ್ದ ಅವರು "ರಾಷ್ಟ್ರ ಪ್ರಶಸ್ತಿ ವಿಜೇತಾ ಸಗಣೀ ಬಾಲ್ಡೀ ಎಳೇತಾ" ಎಂದು ಹೇಳಿದ ಮಾತು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ! ಅಪಾರವಾದ ಜೀವನ ಶ್ರದ್ಧೆ, ಪ್ರೀತಿ, ವಿಶ್ವಾಸ,ಗೌರವ ಮುಂತಾದ ಎಲ್ಲದರ ಮೂರ್ತರೂಪವಾಗಿದ್ದ ಮಹಾಬಲರು ಹೆಸರಿಗೆ ಅನ್ವರ್ಥಕವಾಗಿ ಜೀವಿಸಿದವರು. 'ಗುಣವಜ್ಜನ ಸಂಸರ್ಗಾತ್ ಯಾತಿ ನೀಚೋಪಿ ಗೌರವಂ' ಎಂಬಂತೆ ಅನೇಕ ಗುಣೀಜನರ ಸಾನ್ನಿಧ್ಯದಿಂದಾಗಿ ನನ್ನಂತವರಿಗೂ ಮಹಾಬಲ ಹೆಗಡೆಯವರಂತವರ ಸಹವಾಸ, ಸಾನ್ನಿಧ್ಯ, ಒಡನಾಟ ಸಿಕ್ಕಿದ್ದು ಅವಿಸ್ಮರಣೀಯ ಅನುಭವ.