Thursday, July 26, 2012

Huki


ಮಾಸಿದ ಬಿಂಬ ಮತ್ತು ತೊಡೆಸಂದಿನ ತುರಿಕೆÉ

ಕಿಟಕಿಯ ಪರದೆಯಿಂದಾಚೆಗೆ ಮಬ್ಬು
ಮನಸಿಗೋ ಕಣ್ಣಿಗೋ ಮುಸುಕಿದಾವರಣ
ತೆರೆತೆರೆದರೂ ತಂಗಾಳಿಸುಳಿ ಒಳಬರಲು ಏನಡ್ಡಿ
ಒಳಗೊಳಗೇ ಕೊಳೆಧೂಳು ಝಾಡಿಸಬಾರದೇ ಹಿಡಿದು?
ಕೊಡವಿಕೊಳ್ಳಲೂ ಬೇಕು ಗಟ್ಟಿ
ಎದೆ! ಗುಂಡಿಗೆಯ ತಟ್ಟಿ ಹೂಂಕಾರ
ಹೊಮ್ಮಿ ಖಾಲಿಯಾಗಲೂ
ಬೇಕು ಎಂಟೆದೆ!

ಈಗಷ್ಟೇ ಜೀಟಾಕಿನಲಿ ಗೆಳೆಯ ಕೇಳಿದ್ದ
ಯಾಕೆ ಹೀಗೆ ಮಾರಾಯಾ! ಜನರೆಲ್ಲ
ತುಂಬ ಪ್ಲೇನು? ಎಮೋಶನಲ್ ಫೂಲುಗಳು!
ಬಂಧನದಲ್ಲೇ ಗಾಣದ ಕೋಣಗಳಾಗಿ ಸುತ್ತುತ್ತಾರೆ.
ಆಮಿಷದಿ ನಿಮಿಷಗಳ ಕೊಲ್ಲುತ್ತ ಖಾಲಿ
ಯಾಗುವ ಮೊದಲೇ ಸೋತುಸುಣ್ಣ

ಬೀ ಪ್ರ್ಯಾಕ್ಟಿಕಲ್ ಮಾರಾಯಾ, ನಿಂಗೇನು ಹುಚ್ಚೇ!
ಇಂಡಿಪೆಂಡೆಂಟಾಗಬೇಕು ನೋಡು!
ಯಾರಹಂಗೂ ಇರದೆ ಬೇಕಾಬಿಟ್ಟಿ ಬದುಕ
ಬೇಕು, ಪ್ಲ್ಯಾನ್ ಶೀರ್ ರೆಡಿಮೇಡ್ ಆಗಬೇಕು.
ಎಂಜಾಯ್ ಲೈಫ್ ಯಾರ್…
ಈ ನನ್ ಸುಡುಗಾಡು ಕಮಿಟ್ಟುಮೆಂಟುಗಳೆಲ್ಲ
 ಒಮ್ಮೆ ತೀರಿತೆಂದರೆ ಮುಗಿಯಿತು ನೋಡು, ನಾನು
ಕೇರ್ ಫ್ರೀ…. ಸ್ವಾತಂತ್ರ್ಯ ಪಡೆದ ಹಕ್ಕಿ!
ಅಲ್ಲೀವರೆಗೂ
ಅಗಷ್ಟ್ ಹದಿನೈದು…ಝಂಡಾ….ಝಂ…ಢಾ!
ಕನಸಿನೊಳಗಣ ಜನಗಣ-ತಿ, ಲೆಕ್ಕಾಚಾರ
ಮೂಗು ಮುಚ್ಚಿದ ಮೂರು
ಗಾ…ಯ…ತ್ರಿ!

ಕಣ್ಣೆದುರಿನ ಪರದೆ ಸರಿದರೂ ತಂಗಾಳಿ ಸುಳಿತದಿದ್ದರ
ಮರ್ಮ ಹೊಳೆದದ್ದು ತೊಡೆಸಂದಿಯಲ್ಲಿ ತುರಿಕೆ
ಸುರುವಾದಾಗಲೇ!
ಒಳಗಣ್ಣ  ಆವರಿಸಿದ ಧೂಳಿನಪೊರೆ ಇಂದೇ
ಝಾಡಿಸಿಬಿಟ್ಟು, ಆಗಿಬಿಡಲಿ ಗಾಂಧೀಜಯಂತಿ!
ತ್ರಿಕರಣ ಶುದ್ಧೀಕರಣ!
                                      -ವಸಂತ
                                      26-ಜುಲೈ-2012

No comments:

Post a Comment