ಆಗಷ್ಟೇ ಬೇರು ಬಿಟ್ಟು
ನೆಲಸೀಳಿ ತಳಸೇರುವ ತವಕ
ಮುಗಿಲೆಡೆಗೆ ನೆಟ್ಟ ನೇರ ನೋಟ
ಮೈಚಾಚಿ ಗಿಣ್ಣೊಡೆದು ತೊಡೆ
ಸಡಿಲಿಸಿ; ಸಿಂಗಾರವೊಡೆದು ಸಾವಿರ
ಬೀಜ ಫಲ ಬರ್ಜರೀ
ಫಸಲು ಸುಗ್ಗಿಯ ಕಾಲಕ್ಕೆ
ಜೋಗುಳದ ತಾಳಕ್ಕೆ ಗೆಜ್ಜೆಹೆಜ್ಜೆ;
ಗುಟ್ಟಾಗಿ ಕಂದನ ಕೂಡ
ಪಿಸುಮಾತು.......
ಚುಕ್ಕಿ ಚಂದಾಮ ಬಲುದೂರ ಚಿನ್ನಾ
ಬೇರುಬಿಡು ಆಳಕ್ಕೆ
ಗಟ್ಟಿಗೊಳ್ಳಲಿ ನೆಲದೊಡಲು
ತಾಯಿಬೇರು.
ಸಂತಸದ ನೋವೆಂದೆ ಎಣಿಸಿದ್ದೆ
ಮೊದಮೊದಲು
ಮೈಯೆಲ್ಲಾ ಸುಸ್ತು, ಬಾಡುತ್ತಿದೆ
ಹೆಂಗರುಳು,ರುಚಿಯಿಲ್ಲ ನಾಲಗೆಗೆ
ಎಸರೂ ಬತ್ತುತ್ತಿದೆ
ಬಸಿರು ಮೊದಲಿನಂತಿಲ್ಲ
ಬೇರುಸಡಿಲಾದಮ್ತೆ, ಅಕಾಶವೇ
ತಲೆಮೇಲೆ ಬಿದ್ದಂತೆ ಅಪಶಕುನ
ಕೊರೆಯುತ್ತಿದೆ ಹುಳು
ನನ್ನೆಲ್ಲ ಕಸುಹೀರಿ ಹಿಂಡಿ ಹಿಪ್ಪೆ
ಕುಸಿಯುತ್ತಿದ್ದೇನೆ
ಇಂದಿಗೂ ಗೆಲವು ನಿನ್ನದೇ
ನಾನು ಸೋತುಗೆದ್ದಿದ್ದೇನೆ!
Subscribe to:
Post Comments (Atom)
Awesome!! Nannella kasu heeri hindi hippe iigaloogeluvu ninnade .. nanu sotu geddiddene salu tumba chendagi moodide..;)
ReplyDeleteವಸಂತ ಬ್ಲಾಗಿನಲ್ಲಿ ನಿನ್ನ ನೋಡಿ ಖುಶಿಯಾಯಿತು. ' ನಾನು ಸೋತು ಗೆದ್ದಿದ್ದೇನೆ ಚಂದದ ಸಾಲುಗಳು ' ನಿನ್ನ ಬರಹಗಳ ಸಾಲು ಹೆಚ್ಚಲಿ.
ReplyDeleteಪ್ರೀತಿಯಿಂದ ಉಮಾವತಕ್ಕಾ.
Thanks smita and Umakka
ReplyDeleteNice..!
ReplyDeleteWould be lovely to see some Geeta Mam's Kavite too! :-)
Thanks Poornima.
ReplyDeleteGeeta will publish her own blog soon!
bhatare Antu linege bandiddiri. nimmalli enobba kavi santasavayitu from basavaraj dodamani tv9 davanagere dodbasu@gmail.com
ReplyDeleteThanks Basu
ReplyDeletenanna mail id: vrbhat06@gmail.com
ReplyDelete