ಯಾಕೆ ಮಂಕಾಗಿದ್ದೀ ಹೇಳು? ಮರುಳು ನಿನಗೆ! ನಿನ್ನಷ್ಟಕ್ಕೇ ಮನಸಿನೊಳಗೆ ಮಂಡಿಗೆ ತಿನ್ನುವದನ್ನು ಬಿಟ್ಟುಬಿಡು ಎಂದು ಎಷ್ಟುಬಾರಿ ಹೇಳಿಲ್ಲ ನಿನಗೆ? ಸಕಾ ಸುಮ್ಮನೆ ತ್ರಾಸು ಮಾಡಿಕೊಳ್ಳುತ್ತೀ. ನೀನು ಹಾಗೆ ಇರುವುದನ್ನು ನನಗೆ ನೋಡಲಾಗದು.
ನನಗೆ ಗೊತ್ತು, ನಿನ್ನೊಳಗೊಂದು ಅದ್ಭುತ ಪ್ರಪಂಚವಿದೆ.ಅಲ್ಲೊಂದು ಪ್ರಶಾಂತ ಸರೋವರವುಂಟಲ್ಲ ಅದರೊಳಗೆಷ್ಟುಬಾರಿ ಮುಳುಗೆದ್ದು ಖುಶಿಪಟ್ಟಿದ್ದೆವಲ್ಲ ಇಬ್ಬರೂ! ಆ ಖುಶಿಯ ಹ್ಯಾಂಗ್ ಓವರಿನಲ್ಲೇ ಯಾವಾಗಲೂ ಇರಬಯಸುವ ನಿನ್ನ ಬಗ್ಗೆ ನನಗೇನೂ ಅಭ್ಯಂತರವಿಲ್ಲ.
ಆದರೆ....ಈ ಪ್ರಪಂಚವೊಂದಿದೆಯಲ್ಲಾ....ಹೊಟ್ಟೆ ಮತ್ತು ಅದರ ಸುತ್ತಮುತ್ತಲಿನದು! ಅದೊಂಥರಾ ಬೇರೆಯದೆ....ಅದೊಂದು ರೀತಿಯ ಅರಾಜಕ ಜಗತ್ತು! ಬಲವಂತರಿಗಷ್ಟೇ ಜಾಗ ದಕ್ಕುವುದಲ್ಲಿ! ಹಸಿವು....ನೀರಡಿಕೆ...ಅದು ಹಿಂಗಿದ ಬಳಿಕ ಬೆತ್ತಲೆ ಜಗತ್ತು! ಉಳಿದುದೆಲ್ಲಾ ಬರಿಗಣ್ಣಿಗೆ ಕಾಣುವ ಒಣ ಬಣ್ಣಗಳು! ಹಾಗಾಗಿಯೆ ಚಿಟ್ಟೆಗಳೂ ಕಾಣೆಯಾಗುತ್ತಿವೆ! ಗುಬ್ಬಚ್ಚಿ ಗೂಡುಕಟ್ಟುತ್ತಿಲ್ಲ. ಪ್ಲಾಸ್ಟಿಕ್ ಹೂವುಗಳೆಡೆಗೆ ಭ್ರಮರವೂ ಹಾಯುವುದಿಲ್ಲ......ಸಕ್ಕರೆಪಾಕ ಬೆರೆಸಿದ ಕಲಬೆರಕೆ ಜೇನುತುಪ್ಪವೂ ತುಟಿತುಂಬುವದಿಲ್ಲ!
ಈವೆಲ್ಲ ನಿನಗೆ ಚೆನ್ನಾಗಿ ಗೊತ್ತು!
ನೀನೇನೋ ಸಮಯ ಸಿಕ್ಕಾಗಲೆಲ್ಲ ನಿನ್ನ ಒಳಗಿನ ಭಾವಕೋಶದೊಳಗೆ ತೂರಿಕೊಳ್ಳುತ್ತ ಇರುವ ಮರೆಯುತ್ತೀ. ಭ್ರಮರವಾಗಿ ಜಾಜಿ,ಸುರಗಿ,ಪಾರಿಜಾತ,ಸಂಪಿಗೆ.......ದಾಸವಾಳವನ್ನೂ ಬಿಡದೇ ಹೀರುತ್ತಿ. ಒಡಲಲ್ಲಿ ಜೇನ್ಗಡಲನ್ನೇ ತುಂಬಿಕೊಂಡು ತುಟಿಗೆರೆಯಲು ಅವಸರಿಸುತ್ತೀ! ನನಗೆ ಅಸೂಯೆಯಾಗುತ್ತದೆ ಒಮ್ಮೊಮ್ಮೆ!
ನಾನಾದರೂ ಏನು ಮಾಡಲಿ ಹೇಳು? ಕಾಲದ ಕೈಗೊಂಬೆ! ಒಂದರೆಗಳಿಗೆ ನಿಂತರೂ ಬಾರಿಸುತ್ತದೆ,ಭಾದಿಸುತ್ತದೆ ಪುರುಸೊತ್ತಿಲ್ಲದ ಓಟ! ಎಲ್ಲಿಗೆ.....ಯಾಕೆ.......ಕೇಳಬೇಡ. ಅದು ಕಾಲನ ನಿಯಮ. ಕಾಲ್ತುಳಿತಕ್ಕೆ ಸಿಕ್ಕು ಸುಕ್ಕಾಗುವುದು ನೆಲವೊಂದೇ ಅಲ್ಲ. ನೆರಳೂ ಕೂಡ! ಅರವತ್ತರ ಮೊದಲೇ ಅರಳು ಮರಳು. ಅದಕ್ಕೆಂದೇ ಇರದುದರೆಡೆಗೆ ಸದಾ ಸೆಳೆತ, ತುಡಿತ. ಅದು ಸಿಗಲೊಲ್ಲದು ಇದು ಬಿಡಲೊಲ್ಲದು.
ಒಂದಾನೊಂದು ಕಾಲದಲ್ಲಿ ಎರಡಳಿದು ಒಂದಾಗಲು ಕನಸಿದ್ದ ಮನಸು ಒಂದಾದರೂ, ಮರುಹುಟ್ಟು ಆಗಿದ್ದು ಎರಡೇ! ಮತ್ತೆ ಬೇರೆಬೇರೆ ಮೇರೆ! ಇರಲಿ ಬಿಡು... ಢಿಕ್ಕಿಯಾಗದಂತೆ ಕಾಪಿಡುವ. ಬೇಲಿಯ ಎಲ್ಲೆ ಮೀರಿ ಬೆಳೆಯಲಿ ನಮ್ಮೆದುರಿಗೇ.
ಸುಮ್ಮನಿದ್ದು ಕೊಲ್ಲಬೇಡ. ಮನಸಲ್ಲೇ ಕೊರಗಬೇಡ. ನನ್ನ ಬೇರು ಇನ್ನೂ ನಿನ್ನಲ್ಲಿಯೇ ಭದ್ರವಾಗಿದೆ ಧರಿತ್ರಿ!
ನೀನು ಫಲವತ್ತಾದ ನೆಲ.
ಎಂದೆಂದೂ ಬರಡಾಗದ ಭಾವಸಾರ.
ಬತ್ತಗೊಡದಿರು ಒತ್ತಡದಿ
ಭಾವಸೆಲೆಯ
ಉಕ್ಕಿಹರಿಯಲು ಬಿಡು
ಕೊಚ್ಚಿಹೋಗಲಿ ಎಲ್ಲ
ಕೊಚ್ಚೆ !
ಇಗೋ ಈಗ ಮತ್ತೆ ಬಂದಿದ್ದೇನೆ.... ನನ್ನೊಲವಿನ ನಿನ್ನ ಜಗತ್ತಿಗೆ....ಬಾಗಿಲು ತೆರೆಯೇ!
Subscribe to:
Post Comments (Atom)
ಬತ್ತಗೊಡದಿರು ಒತ್ತಡದಿ
ReplyDeleteಭಾವಸೆಲೆಯ
ಉಕ್ಕಿ ಹರಿಯಲುಬಿಡು
ಕೊಚ್ಚಿ ಹೋಗಲಿ ಎಲ್ಲಾ
ಕೊಚ್ಚೆ!
ಎಂಥಾ ಭಾವ ಪೂರ್ಣ ಸಾಲುಗಳು.ಖುಷಿ ಆಯ್ತು.
ವಸಂತ್ ಸರ್,
ReplyDeleteತುಂಬಾ ಚೆನ್ನಾಗಿದೆ..... ಭಾವಪೂರ್ಣವಾಗಿದೆ...... ಬಾಗಿಲು ತೆಗೆಯುತ್ತಾರೆ ಬಿಡಿ............
Thanks umakka,
ReplyDeleteDinakar thank you! Wel come to nanna jagattu! baagilu sadaa terediruttade!
ಭಾವಪೂರ್ಣ ಬರಹ. ಧರಿತ್ರಿ ಸಹನಶೀಲೆ... ಕಾಯುತ್ತಾಳೆ..ಪ್ರತೀಕ್ಷೆಯಲ್ಲಿ ಮತ್ತೆ ಕಾಪಿಡುವದರಲ್ಲಿ.. ಅದೊಂದೇ ನಮಗಿರುವ ನಂಬಿಕೆ ಮತ್ತು ಸತ್ಯ.
ReplyDeleteellidri sir ishtu divasa kannige beelade?:) u r simply superb.doosra maate illa:) innu nimma blog ge naanu khaayam oduga:) fix aagbitte:)
ReplyDeleteThank you Bhava.
ReplyDeleteGoutam hudkodralle kaledu hogidde! Ivaagloo hudukkotaane idini! hosadu kandaaga khandita heltene! Thanks for your comment. Welcome to my blog.
Kavipungavarige namaskara. Thumba chennagide. Innashtu ukki hariyali nimma bhava brunga.
ReplyDeleteKocchi hoyithu swartha durase....swachhavayitu nanna mana.
Matte baruttene.
hello naanu ninge bhaava na? henge?
ReplyDeleteGoutam bhava endiddu narayana bhatrige! ondarthadalli neenoo bhavane sai! hegendre havyakaralli ellarigoo bhava ennuvadu roodhiyaldana?!
ReplyDeleteAshwath Thanks! It's just to forget our routine!
ReplyDeletehaha sari sari.nanu bhaavane:)
ReplyDelete