Monday, January 25, 2010

ಒಪ್ಪಿಸಿಕೋ! ಮನದಾಳದ ಒಂದು ಸಲಾಂ! ....ಎತ್ತರೆತ್ತರ ಏರು ಸೊಲ್ಲೆತ್ತದಿರಲಿ ಎಂದಿಗೂ ಸೋಲು!

ನಮ್ಮ ಎತ್ತರದ ಹುಡುಗ ಏರಿದೆತ್ತರವ ಕಂಡು ಎಷ್ಟೊಂದು ಖುಶಿಯಾಗುತ್ತಿದೆಯೆಂದರೆ....ಉಹೂಂ...ಹೇಳಲು ಬರುತ್ತಿಲ್ಲ!
ನಾನು ಆಗ ತಾನೇ ಮಾಸ್ತರಿಕೆಗೆ ಸೇರಿದ ಹೊಸದು! ಮೊದಲದಿನವೇ ಎತ್ತರದ ಹುಡುಗ ಗಮನಸೆಳೆದಿದ್ದ! ಸಂವಹನದ ಕ್ಲಾಸಿನಲ್ಲಿ ಕೊನೆಯ ಬೆಂಚಿನಲ್ಲಿ ಚೂಪಿಕೆ ಕುಳಿತು, ಮೌನವಾಗಿಯೇ ಕಣ್ಣುಗಳಲ್ಲಿ ಕಮ್ಯುನಿಕೇಟ್ ಮಾಡಿದ್ದ! ಕೆಲವೇ ದಿನಗಳಲ್ಲಿ ಆ ಕ್ಲಾಸಿಗೆ ಕ್ಲಾಸು ನನಗೆ ಪ್ರಿಯವಾಗಲು ಕಾರಣ ಆ ಎಲ್ಲ ಹುಡುಗ-ಹುಡುಗಿಯರ ಉತ್ಸಾಹ,ಕ್ರಿಯೇಟಿವಿಟಿ! ಆ ಒಂದು ವರ್ಷ ನನ್ನನ್ನು ಕ್ರಿಯಾತ್ಮಕವಾಗಿ ಬೆಳೆಸಿದ ಎಲ್ಲ ಹುಡುಗ-ಹುಡುಗಿಯರ ಕುರಿತು ಇವತ್ತಿಗೂ ನನ್ನಲ್ಲಿ ಆದರಣೀಯ ಭಾವವಿದೆ. ಅದಿಂದು ನೆನಪಾದದ್ದು ಅದೇ ಎತ್ತರದ ಹುಡುಗನ ನೆಪದಿಂದ!
ಎತ್ತರದವರಿಗೆ ಎದೆಗಾರಿಕೆ ಹೆಚ್ಚು! ಆತ ಕೂಡ ಹಾಗೆಯೇ....ಉತ್ತುತ್ಸಾಹಿ,ಸಾಹಸೀ ಮನೋಭಾವ,ಕೆಚ್ಚಿನ ಕನಸುಗಳು! ಎಂದೋ ಒಮ್ಮೆ ಸೈನ್ಯಸೇರುವ ಆಸೆಯನ್ನು ಹೇಳಿದ ನೆನಪು. ಅದಾಗಿ ಇಂದಿಗೆ ಸರಿಯಾಗಿ ಒಂದು ದಶಕ ಕಾಲ ಸಂದಾಯಿತು. ಈ ನಡುವೆ ನಾನು ಬದುಕಿನ ಹುಡುಕಾಟದಲ್ಲಿ ಕಳೆದುಹೋಗಿದ್ದೆ!
ಹೀಗಿರಲು ಒಂದುದಿನ ಒರ್ಕುಟ್ ಪ್ರಪಂಚದಲ್ಲಿ ಎತ್ತರದ ಹುಡುಗ ಕಂಡ! ಅಸಿಸ್ಟೆಂಟ್ ಕಮಾಂಡರ್ ಮಹೇಂದ್ರ! ನಕ್ಸಲರ ವಿರುದ್ಧ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಸಿ.ಆರ್.ಪಿ.ಎಫ್ ನಲ್ಲಿ ಅಧಿಕಾರಿಯಾಗಿ ಓರಿಸ್ಸಾ ರಾಜ್ಯದ ಸಂಬಲ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವದಾಗಿ ಹೇಳಿದಾಗಲೇ ಹೆಮ್ಮೆ ಪಟ್ಟಿದ್ದೆ.
ಈ ಹೊತ್ತು ಬೆಳಿಗ್ಗೆ ದೂರದರ್ಶನದಲ್ಲಿ ದ್ವಜಾರೋಹಣ ಕವಾಯಿತನ್ನು ನೋಡುತ್ತಿರುವಾಗ ಸಿ.ಆರ್.ಪಿ.ಎಫ್ ತುಕಡಿಯ ಮುಂದಾಳಾಗಿದ್ದ ಮಹೇಂದ್ರನನ್ನು ಕಂಡು ಮತ್ತೊಮ್ಮೆ ಖುಷಿಯಾಯಿತು.
ಇಲ್ಲಿ ನಾವೆಲ್ಲ ನಮ್ಮ-ನಮ್ಮ ಮನೆಗಳಲ್ಲಿ ಬೆಚ್ಚಗಿರುವಾಗ ಅಲ್ಲಿ ಹಗಲಿರುಳೆನ್ನದೇ ಎಚ್ಚರಿದ್ದು ಕಾಯುವ ಕಾಯಕದಲ್ಲಿ ನಿರತನಾಗಿರುವ ಮಹೇಂದ್ರ ನಿನಗೊಂದು ಖರೇ ನಮಸ್ಕಾರ! ಇನ್ನೂ ಎತ್ತರದವನಾಗು. ಏರಿದೆತ್ತರವೆಂದೂ ನಿನ್ನ ತತ್ತರಿಸದಿರಲಿ.....

3 comments:

  1. ನಿನ್ನ ಕ್ರಿಯಾಶೀಲತೆ ತುಂಬಾ ಖುಶಿಯಾಗ್ತಾ ಇದೆ ವಸಂತಾ.
    ಪ್ರೀತಿಯೊಂದಿಗೆ ಉಮಾವತಕ್ಕಾ

    ReplyDelete
  2. Creativity at its peak;) keep writing!

    ReplyDelete
  3. ಒಂದು ಸಲ ಸಿರ್ಸಿ ಕಾಲೇಜಿನ ಜರ್ನಲಿಸಂ ಕ್ಲಾಸಿನ ಸುತ್ತ ಸುತ್ತಿ ಬಂತು ಮನಸ್ಸು.. :-)
    Between, this layout is much much better for eyes now!

    ReplyDelete